(ನ್ಯೂಸ್ ಕಡಬ) newskadaba.com ಫೆ. 25: ಬೆಂಗಳೂರು: ಒಡಿಶಾದ ಪುರಿ ಬಳಿ ಮಂಗಳವಾರ ಬೆಳಗ್ಗೆ 5.1 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ 91 ಕಿಮೀ ಆಳದಲ್ಲಿ ಬೆಳಗ್ಗೆ 6.10ರ ಸುಮಾರಿಗೆ ಭೂಕಂಪ ಸಂಭವಿಸಿದೆ.


ಇದುವರೆಗೆ ಯಾವುದೇ ಆಸ್ತಿಪಾಸ್ತಿ ಅಥವಾ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಒಡಿಶಾ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಭೂಕಂಪದ ಕೇಂದ್ರವು ಬಂಗಾಳಕೊಲ್ಲಿಯಲ್ಲಿರುವುದರಿಂದ ಅದರ ಪರಿಣಾಮವು ನಗಣ್ಯ ಎಂದು ಹೇಳಿದರು.