(ನ್ಯೂಸ್ ಕಡಬ) newskadaba.com ಫೆ. 25: ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BLR ವಿಮಾನ ನಿಲ್ದಾಣ) ಹೊಸ ವಿಮಾನ ನಿಲ್ದಾಣ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಲು ಮಣಿಪಾಲ್ ಆಸ್ಪತ್ರೆಯು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನೊಂದಿಗೆ ಕೈಜೋಡಿಸಿದೆ.


ಈ ಸೌಲಭ್ಯವು ಪ್ರಯಾಣಿಕರು ಮತ್ತು ವಿಮಾನ ನಿಲ್ದಾ ಣದ ಸಿಬ್ಬಂದಿಗೆ 24/7 ವೈದ್ಯಕೀಯ ಸಹಾಯವನ್ನು ಒದಗಿಸುತ್ತದೆ. ಈ ಅತ್ಯಾಧುನಿಕ ಸೌಲಭ್ಯವು ದಿನದ 24 ಗಂಟೆಯೂ (24/7) ತೆರೆದಿರುತ್ತದೆ, ಮತ್ತು ವೈದ್ಯ ರೊಂದಿಗೆ ಸಮಾ ಲೋಚನೆ, ಪ್ರಥಮ ಚಿಕಿತ್ಸೆ, ಎಕ್ಸ್-ರೇ, ಅಲ್ಟ್ರಾಸೌಂಡ್ (USG) ಮತ್ತು ತುರ್ತು ಆರೈಕೆ ಸೇರಿದಂತೆ ತ್ವರಿತ ಮತ್ತು ಪರಿಣಾಮಕಾರಿ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ.