(ನ್ಯೂಸ್ ಕಡಬ) newskadaba.com ಫೆ. 24. ಬೆಂಗಳೂರು: ಕೆಲವು ದಿನಗಳಿಂದ ಏರುಮುಖವಾಗಿ ಸಾಗುತ್ತಲೇ ಇರುವ ಚಿನ್ನದ ದರ 1 ದಿನದ ಬ್ರೇಕ್ ನಂತರ ಇಂದು (ಫೆ. 24) ಮತ್ತೆ ಹೆಚ್ಚಾಗಿದೆ . ಸೋಮವಾರ 22 ಕ್ಯಾರಟ್ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ ತಲಾ 10 ರೂ. ದುಬಾರಿಯಾಗಿದೆ. ಆ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 8,055 ರೂ.ಗೆ ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 8,787 ರೂ. ಪಾವತಿಸಬೇಕು.


22 ಕ್ಯಾರಟ್‌ನ 8 ಗ್ರಾಂ ಚಿನ್ನ 64,440 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 80,550 ರೂ. ಮತ್ತು 100 ಗ್ರಾಂಗೆ 8,05,500 ರೂ. ಪಾವತಿಸಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 70,296 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 87,870 ರೂ. ಮತ್ತು 100 ಗ್ರಾಂಗೆ 8,78,700 ರೂ. ನೀಡಬೇಕಾಗುತ್ತದೆ.