(ನ್ಯೂಸ್ ಕಡಬ) newskadaba.com ಫೆ. 24. ಬೆಂಗಳೂರು: ಸಾಮಾನ್ಯವಾಗಿ ಮಾರ್ಚ್ ತಿಂಗಳ ಆರಂಭದಲ್ಲಿ ಉದ್ಯಾನಗರಿಯಲ್ಲಿ ಅಧಿಕೃತವಾಗಿ ಬೇಸಿಗೆ ಆರಂಭವಾಗುತಿತ್ತು. ಆದರೆ ಈ ಬಾರಿ ಫೆಬ್ರವರಿ ತಿಂಗಳಲ್ಲಿಯೇ ಬಿರು ಬೇಸಿಗೆಯ ಅನುಭವವಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಬೆಂಗಳೂರು ನಗರದಲ್ಲಿ ಭಾನುವಾರ 33.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ 19.7 ಡಿಗ್ರಿ ಇತ್ತು.

ಬೆಂಗಳೂರಿನಲ್ಲಿ ಒಣ ಹವೆ ಇರುತ್ತದೆ ಎಂದು IMD ಮುನ್ಸೂಚನೆ ನೀಡಿದ್ದು, ಜನರು ಬೇಸಿಗೆಯ ಉಷ್ಣಾಂಶದಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಶಿವರಾತ್ರಿಯ ನಂತರ ಚಳಿಗಾಲ ಕೊನೆಗೊಂಡು ಬೇಸಿಗೆ ಆರಂಭವಾಗುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ಫೆಬ್ರವರಿಯಲ್ಲಿ ಬೇಸಿಗೆಯಂತೆ ಭಾಸವಾಗುತ್ತಿದೆ.
ಸುಡುವ ಬಿಸಿಲಿಯಿಂದ ಮಧ್ಯಾಹ್ನದ ಸಮಯದಲ್ಲಿ ಹೊರ ಹೋಗುವುದನ್ನು ಕಡಿಮೆ ಮಾಡಿದ್ದೇನೆ. ಒಂದು ವೇಳೆ ಹೊರಗೆ ಹೋಗಬೇಕಾದರೆ ಸನ್‌ಸ್ಕ್ರೀನ್ ಹಚ್ಚಿ, ಛತ್ರಿ ಮತ್ತು ನೀರಿನ ಬಾಟಲಿ ಕೊಂಡೊಯ್ಯುತ್ತೇನೆ ಎಂದು ಕಾಲೇಜು ವಿದ್ಯಾರ್ಥಿನಿ ದರ್ಶಿನಿ ಹೇಳಿದರು.