ಸಮುದ್ರಕ್ಕೆ ಬಿದ್ದ ದಂಪತಿ; ನಾಪತ್ತೆಯಾಗಿದ್ದ ಪತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಫೆ. 24. ಕಾಸರಗೋಡು-ಮಂಜೇಶ್ವರ ಹೊಸಬೆಟ್ಟು ಕುಂಡುಕೊಳಕೆಯಲ್ಲಿ ದಂಪತಿ ಸಮುದ್ರಕ್ಕೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಪತಿಯ ಮೃತದೇಹ ಇಂದು ಸಂಜೆ ಉಪ್ಪಳ ಮುಸೋಡಿ ಅಧಿಕೆ ಸಮುದ್ರದಲ್ಲಿ ಕಂಡುಬಂದಿದೆ.
ಹೊಸಂಗಡಿಯಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿದ್ದ ಕಡಂಬಾರ್ ಬಜೆಯ ಭಾಸ್ಕರ (೫೬) ಮೃತ ದುರ್ದೈವಿ.


ಭಾಸ್ಕರ ಹಾಗೂ ಪತ್ನಿ ಮಾಲತಿ ಶನಿವಾರ ಸಂಜೆ ಕುಂಡುಕೊಳಕೆ ತೀರಕ್ಕೆ ತೆರಳಿದ್ದ ವೇಳೆ ಈ ನಡೆದಿದೆ. ಪತ್ನಿಯನ್ನು ಸ್ಥಳೀಯರು ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಆಕಸ್ಮಿಕವೇ ಅಥವಾ ಸಮುದ್ರಕ್ಕೆ ಹಾರಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.
ಅನುಮಾನಾಸ್ಪದವಾಗಿ ಸ್ಕೂಟರ್ ಕಂಡು ಬಂದ ಹಿನ್ನಲೆಯಲ್ಲಿ ಸ್ಥಳೀಯರು ಗಮನಿಸಿದಾಗ ಮಹಿಳೆ ಯೋರ್ವರು ತೀರದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಶೋಧ ನಡೆಸಿದಾಗ ಭಾಸ್ಕರ ನೀರು ಪಾಲಾಗಿರುವುದು ಕಂಡು ಬಂದಿತ್ತು. ಮೃತ ದೇಹ ಉಪ್ಪಳ ಮುಸೋಡಿ ಅಧಿಕೆ ಸಮುದ್ರದಲ್ಲಿ ಪತ್ತೆಯಾಗಿದ್ದು, ಬೋಟ್ ಮೂಲಕ ತೀರಕ್ಕೆ ತರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Also Read  ಮಂಗಳೂರು: ಹರೀಶ್ ಪೂಂಜ ವಿರುದ್ಧ ಮಹಿಳಾ ಕಾಂಗ್ರೆಸ್ ನಿಂದ ದೂರು ದಾಖಲು

error: Content is protected !!
Scroll to Top