(ನ್ಯೂಸ್ ಕಡಬ) newskadaba.com ಫೆ. 21. : PM Internship Scheme ಯೋಜನೆಯಡಿ ಯುವಕರಿಗೆ ಇಂಟರ್ನ್ಶಿಪ್ ಗೆ ಹೊಸ ಅವಕಾಶಗಳನ್ನು ನೀಡಲಾಗಿದೆ. ಈ ಯೋಜನೆಯ ಮೂಲಕ 1 ಕೋಟಿ ಯುವಕರಿಗೆ ಕೇಂದ್ರ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸುವುದು ಕೇಂದ್ರ ಸರಕಾರದ ಗುರಿಯಾಗಿದೆ.


ಈ ಯೋಜನೆಯಡಿಯಲ್ಲಿ ಯುವಕರಿಗೆ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಕಲಿಸುವ ಮೂಲಕ ಭವಿಷ್ಯದ ಉದ್ಯೋಗಕ್ಕಾಗಿ ಅವರನ್ನು ಸಿದ್ಧಪಡಿಸಲಾಗುತ್ತದೆ ಅದೇ ರೀತಿ ಈ ಯೋಜನೆಯಡಿಯಲ್ಲಿ ತರಬೇತಿ ಪಡೆಯುತ್ತಿರುವ ಯುವಕರು ತಮ್ಮ ಉದ್ಯೋಗದಲ್ಲಿ ಉತ್ತಮ ತಾಂತ್ರಿಕ ಜ್ಞಾನವನ್ನು ಪಡೆಯುತ್ತಾರೆ,ಇದು ಅವರ ವೃತ್ತಿ ಮತ್ತು ಭವಿಷ್ಯವನ್ನು ಬಲಪಡಿಸುತ್ತದೆ.