(ನ್ಯೂಸ್ ಕಡಬ) newskadaba.com ಫೆ. 19. ತೆಂಗಿನಕಾಯಿ ಬೆಲೆ ಇದೀಗ ಮಾರುಕಟ್ಟೆಯಲ್ಲಿ ದಾಖಲೆಯತ್ತ ಮುನ್ನುಗ್ಗುತ್ತಿದೆ. ಮದುವೆ ಸೀಜನ್ ಮೊದಲೇ ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಬಂಪರ್ ಬೆಲೆ ಬಂದಿದ್ದು, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ, ಆದರೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.


ನಿತ್ಯದ ವೆಜ್-ನಾನ್‌ವೆಜ್ ಹೋಟೆಲ್ ಅಡುಗೆಗೆ ಹಾಗೂ ಬೇಕರಿಗೆ ಅವಶ್ಯ ವಾಗಿರುವ ತೆಂಗಿ ನಕಾಯಿಯ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರು ಖರೀದಿ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಒಣ ಕೊಬ್ಬರಿಗಿಂತ ಹಸಿ ತೆಂಗಿನಕಾಯಿಗೆ ಮತ್ತು ಕೊಬ್ಬರಿ ಎಣ್ಣೆ ಮತ್ತು ಕೊಬ್ಬರಿ ಪೌಡರ್‌ಗೆ ಬೆಲೆ ಹೆಚ್ಚಾಗಿದೆ. ಕೊಬ್ಬರಿ ಎಣ್ಣೆ ಲೀ. ಗೆ 280-320 ರು. ಆಗಿದೆ. ಕೊಬ್ಬರಿ ಪೌಡರ್ 230 ಆಗಿದೆ.