ಬೆಂಗಳೂರು: ಫೆ.20ಕ್ಕೆ ನೀರಿನ ಅದಾಲತ್

(ನ್ಯೂಸ್ ಕಡಬ) newskadaba.com ಫೆ. 19. ಬೆಂಗಳೂರು: ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಗುರುವಾರ ಬೆಳಿಗ್ಗೆ 9.30ರಿಂದ 11 ರವರೆಗೆ ನೀರಿನ ಅದಾಲತ್‍ ನಡೆಯಲಿದೆ. ಅದಾಲತ್‌ನಲ್ಲಿ ನೀರಿನ ಬಿಲ್‌, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ, ಗೃಹ ಬಳಕೆಯಿಂದ ವಾಣಿಜ್ಯ ಬಳಕೆಗೆ ಪರಿವರ್ತನೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ವಾಯುವ್ಯ-2 (ಸಂಪರ್ಕ ಸಂಖ್ಯೆ 28360030), ವಾಯುವ್ಯ-4 (9964216530), ಕೇಂದ್ರ-1-2 (9845444053), ಈಶಾನ್ಯ-2 (22945135), ಉತ್ತರ-1-2 (22945139), ಉತ್ತರ-2-2 (8618366506), ದಕ್ಷಿಣ-1-2 (40977432), ದಕ್ಷಿಣ-2-2 (9845444090), ನೈಋತ್ಯ-2 (9845444085), ನೈಋತ್ಯ-5 (22945198), ಪೂರ್ವ-1-3 (9535544974), ಪೂರ್ವ-2-3 (8197382595) ಗಳಲ್ಲಿ ಬೆಳಿಗ್ಗೆ 9.30 ರಿಂದ ಬೆಳಿಗ್ಗೆ 11 ರವರೆಗೆ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದು.

Also Read  ನೂಜಿಬಾಳ್ತಿಲ: ಮನೆಯ ಗೋಡೆ ಕುಸಿತ ➤ ಪ್ರಾಣಾಪಾಯದಿಂದ ಪಾರು

ಇದಲ್ಲದೆ, ಸಾರ್ವಜನಿಕರು ಜಲಮಂಡಳಿಯ ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916 ಗೆ ಕರೆಮಾಡಿ ದೂರು ದಾಖಲಿಸಬಹುದು. ವಾಟ್ಸ್ ಆ್ಯಪ್ ಸಂಖ್ಯೆ– 8762228888ಗೆ ಸಂದೇಶದ ಮೂಲಕವೂ ದೂರು ಸಲ್ಲಿಸಬಹುದು ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top