(ನ್ಯೂಸ್ ಕಡಬ) newskadaba.com ಫೆ. 15. ವಿಟ್ಲ ಮೇಗಿನಪೇಟೆಯ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಪಂಚ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಕರ್ತರು ಮತ್ತು ಶೌರ್ಯ ವಿಪತ್ತು ತಂಡದ ಸದಸ್ಯರು ಕರ್ತವ್ಯ ನಿರ್ವಹಿಸಿದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು ಮತ್ತು ವಿಪತ್ತು ತಂಡ ಸಮಾಜಕ್ಕೆ ಉಪಯುಕ್ತ ತಂಡ ಎಂದು ಹೇಳಿದರು.
ನಂತರ ಯೋಜನೆಯ ಪ್ರಾದೇಶಿಕ ನಿರ್ದೇಶಕರು, ಯೋಜನಾಧಿಕಾರಿಗಳು, ಕೃಷಿ ಅಧಿಕಾರಿಗಳು, 9 ವಲಯದ ಮೇಲ್ವಿಚಾರಕರು, ತಾಂತ್ರಿಕ ಸಿಬ್ಬಂದಿಗಳು, ಕಚೇರಿ ಸಿಬ್ಬಂದಿಗಳು ಹಾಗೂ ಶೌರ್ಯ ತಂಡದ ಸದಸ್ಯರು ಸೇರಿ ಪೂಜ್ಯರಿಗೆ ಗೌರವ ಸಮರ್ಪಿಸಲಾಯಿತು.
ಶ್ರೀ ಭಗವಾನ್ ಚಂದ್ರನಾಥ ಸ್ವಾಮಿ ಪ್ರತಿಷ್ಠಾ ಮಹೋತ್ಸವ – ಡಾ|ವೀರೇಂದ್ರ ಹೆಗ್ಗಡೆಯವರಿಂದ ಗೌರವಾರ್ಪಣೆ
