(ನ್ಯೂಸ್ ಕಡಬ) newskadaba.com ಫೆ. 14. ಬೆಂಗಳೂರು: ಚಿನ್ನದ ದರ ಇಂದು (ಫೆ. 14) ಮತ್ತೆ ಏರಿಕೆ ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 10 ರೂ. ಏರಿಕೆಯಾಗಿ 7,990 ರೂ.ಗೆ ತಲುಪಿದರೆ, 24 ಕ್ಯಾರಟ್ 1 ಗ್ರಾಂ ಚಿನ್ನದ ದರ 11 ರೂ. ಏರಿಕೆಗೊಂಡು 8,716 ರೂ.ಗೆ ತಲುಪಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 63,920 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 79,900 ರೂ. ಮತ್ತು 100 ಗ್ರಾಂಗೆ 7,99,000 ರೂ. ಪಾವತಿಸಬೇಕಾಗುತ್ತದೆ.


ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 69,728 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 87,160 ರೂ. ಮತ್ತು 100 ಗ್ರಾಂಗೆ 8,71,00 ರೂ. ಪಾವತಿಸಬೇಕಾಗುತ್ತದೆ.