(ನ್ಯೂಸ್ ಕಡಬ) newskadaba.com ಫೆ. 14. ಬೆಂಗಳೂರು: ಸ್ಟೇಜ್ ಬೈ ಸ್ಟೇಜ್ ನಮ್ಮ ಮೆಟ್ರೋ ಪ್ರಯಾಣದ ದರದಲ್ಲಿ ಶೇ.100ರಷ್ಟು ಹೆಚ್ಚಳವಾಗಿದ್ದನ್ನು ಕಡಿಮೆ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ನಮ್ಮ ಮೆಟ್ರೋ ಪ್ರಯಾಣದ ಗರಿಷ್ಠ ದರ ಹೆಚ್ಚಳ ಶೇ.70ಕ್ಕೆ ಇಳಿಕೆ ಮಾಡಲು ತೀರ್ಮಾನಿಸಲಾಗಿದ್ದು, ಇಂದಿನಿಂದ ಪರಿಷ್ಕೃತ ಪ್ರಯಾಣದ ಇಳಿಕೆ ದರಗಳು ಜಾರಿಯಾಗಿವೆ.
![](https://i0.wp.com/newskadaba.com/wp-content/uploads/2024/11/Pilya-Scheme.gif?resize=1200%2C1698&ssl=1)
![](https://i0.wp.com/newskadaba.com/wp-content/uploads/2024/10/1001612748.jpg?resize=904%2C1280&ssl=1)
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್ ಅವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೆಟ್ರೋ ದರದ ಗರಿಷ್ಠ ಹೆಚ್ಚಳವನ್ನು ಶೇಕಡಾ 70ಕ್ಕೆ ನಿಗದಿಪಡಿಸಲಾಗಿದೆ. ಈ ಬದಲಾವಣೆಗಳು ಫೆಬ್ರವರಿ 14ರಿಂದ ಜಾರಿಗೆ ಬರಲಿವೆ ಎಂದು ಘೋಷಿಸಿದರು.