(ನ್ಯೂಸ್ ಕಡಬ) newskadaba.com, ಫೆ.12. ನವದೆಹಲಿ: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಚಿನ್ನಾಭರಣ ಖರೀದಿಸಿಬೇಕೆನ್ನುವ ಹಲವರ ಕನಸು ಕನಸಾಗಿಯೇ ಉಳಿದಿದೆ. ಈ ಬೆನ್ನಲ್ಲೇ ಇದೀಗ ಚಿನ್ನ ಖರೀದಿಗೆ ಕಾಲ ಕೂಡಿಬಂದಿದೆ. ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಕುಸಿತ ಕಂಡ ಪರಿಣಾಮವಾಗಿ ಇಲ್ಲಿನ ಚಿನಿವಾರಪೇಟೆಯಲ್ಲಿ ಬುಧವಾರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.
![](https://i0.wp.com/newskadaba.com/wp-content/uploads/2024/11/Pilya-Scheme.gif?resize=1200%2C1698&ssl=1)
![](https://i0.wp.com/newskadaba.com/wp-content/uploads/2024/10/1001612748.jpg?resize=904%2C1280&ssl=1)
ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 345 ರೂ.ಗಳಷ್ಟು ಕಡಿಮೆಯಾಗಿದ್ದು, 85,178 ರೂ.ಗೆ ಮಾರಾಟವಾಗಿದೆ.
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಬುಧವಾರ ಚಿನ್ನದ ಬೆಳೆಯಲ್ಲಿ ಇಳಿಕೆ ಕಂಡುಬಂದಿದೆ. 10 ಗ್ರಾಂ ಚಿನ್ನಕ್ಕೆ 345 ರೂ. ಅಥವಾ ಶೇ 0.4 ರಷ್ಟು ಕಡಿಮೆಯಾಗಿದ್ದು, 85,178 ರೂ.ಗೆ ಮಾರಾಟವಾಗಿದೆ. ಈ ಅವಧಿಯಲ್ಲಿ ಒಟ್ಟು 16,401 ಕೆಜಿ ಚಿನ್ನ ಮಾರಾಟವಾಗಿದೆ.
ದುರ್ಬಲ ಜಾಗತಿಕ ಸೂಚ್ಯಂಕಗಳು ಚಿನ್ನದ ಬೆಲೆ ಕುಸಿತಕ್ಕೆ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ. ಜಾಗತಿಕವಾಗಿ, ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್‌ಗೆ ಚಿನ್ನದ ದರ ಶೇ 0.18 ರಷ್ಟು ಕಡಿಮೆಯಾಗಿ 2,892.76 ಡಾಲರ್‌ಗೆ ತಲುಪಿದೆ.