(ನ್ಯೂಸ್ ಕಡಬ) newskadaba.com ಕಡಬ, ಫೆ.08. ರಾಜ್ಯ ಯುವ ಕಾಂಗ್ರೆಸ್ ಗೆ ನಡೆದ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪೈಝಲ್ ಎಸ್ಇಎಸ್ ಗೆಲುವು ಸಾಧಿಸಿದ್ದಾರೆ.
ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಹಮ್ಮದ್ ಶಾಕೀರ್ ಹಾಗೂ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚೇತನ್ ಕಜೆಗದ್ದೆ ಆಯ್ಕೆಯಾಗಿದ್ದಾರೆ. ಕಡಬ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಶಿಯಾಬುದ್ದೀನ್ ಮತ್ತು ಲೋಕೇಶ್ ಆಯ್ಕೆಯಾಗಿದ್ದು, ಕಾರ್ಯದರ್ಶಿಗಳಾಗಿ ಶ್ಯಾಂಡೋ, ಸಾಗರ್, ಪ್ರದೀಪ್ ಕಳಿಗೆ ಆಯ್ಕೆಯಾಗಿದ್ದಾರೆ.