ನಾಳೆಯಿಂದ ಕಡಬ ಮೆಡಿಕಲ್ ಸೆಂಟರ್ ನಲ್ಲಿ ಶ್ವಾಸಕೋಶದ ತಜ್ಞರು ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಫೆ.08. ಇಲ್ಲಿನ ಕಳಾರದಲ್ಲಿ ಕಳೆದ ಕೆಲವು ಸಮಯಗಳಿಂದ ಕಾರ್ಯಾಚರಿಸುತ್ತಿರುವ ‘ಕಡಬ ಮೆಡಿಕಲ್ ಸೆಂಟರ್’ನಲ್ಲಿ ನಾಳೆಯಿಂದ (ಫೆಬ್ರವರಿ 09) ಪ್ರತೀ ತಿಂಗಳ ಎರಡನೇ ಭಾನುವಾರ ಶ್ವಾಸಕೋಶ ತಜ್ಞರಾದ ಡಾ. ಪ್ರೀತಿರಾಜ್ ಬಲ್ಲಾಳ್ MBBS, DNB, IDCCM, EDARM ಅವರು ಸಾರ್ವಜನಿಕ ಸೇವೆಗೆ ಲಭ್ಯರಿರಲಿದ್ದಾರೆ.

ಶ್ವಾಸಕೋಶಕ್ಕೆ ಸಂಬಂಧಿಸಿದ ಉಸಿರಾಟದ ತೊಂದರೆ, ಅಸ್ತಮಾ, ಅಲರ್ಜಿ, COPD, Tuberculosis, Sleep Apnea, ಕೋವಿಡ್ ಸಂಬಂಧಿತ ಶ್ವಾಸಕೋಶದ ಸಮಸ್ಯೆಗಳು, Bronchoscopy, Lung Function ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದು, ಪ್ರತೀ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ರ ವರೆಗೆ ಲಭ್ಯರಿರಲಿದ್ದಾರೆ. ಅಲ್ಲದೆ ಎಲ್ಲಾ ಭಾನುವಾರ ಹೃದ್ರೋಗ ತಜ್ಞರಾದ ಡಾ. ಮಹೇಶ್ ಬಸಪ್ಪ MBBS, MD, FAPSC (CARDIO) ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ರ ವರೆಗೆ ಲಭ್ಯರಿರಲಿದ್ದು, ಸಾರ್ವಜನಿಕರು ಈ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ 7899555300 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಶಾಸಕರ ಹಗ್ಗ-ಜಗ್ಗಾಟಕ್ಕೆ ತೆರೆ - ಬಳ್ಳಾರಿಗೆ ನೂತನ ಜಿಲ್ಲಾಧಿಕಾರಿ ಆಯ್ಕೆ

error: Content is protected !!
Scroll to Top