38ನೇ ರಾಷ್ಟ್ರೀಯ ಗೇಮ್ಸ್‌: ಟೆನಿಸ್‌ನಲ್ಲಿ ಕರ್ನಾಟಕಕ್ಕೆ ಬೆಳ್ಳಿ, ತಮಿಳುನಾಡಿಗೆ ಚಿನ್ನ

(ನ್ಯೂಸ್ ಕಡಬ) newskadaba.com , ಫೆ.08. ಡೆಹ್ರಾಡೂನ್‌: 38ನೇ ರಾಷ್ಟ್ರೀಯ ಗೇಮ್ಸ್‌ನ ಟೆನಿಸ್‌ನಲ್ಲಿ ಕರ್ನಾಟಕ ಪುರುಷರ ತಂಡ ಬೆಳ್ಳಿ ಪದಕ ಗೆದ್ದಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ 0-2 ಸೋಲು ಎದುರಾಗಿ, ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮೊದಲ ಸಿಂಗಲ್ಸ್‌ನಲ್ಲಿ ರಾಜ್ಯದ ರಿಶಿ ರೆಡ್ಡಿ ವಿರುದ್ಧ ತಮಿಳುನಾಡಿನ ಅಭಿನವ್‌ ಷಣ್ಮುಗಂ 3-6, 7-6(8-6), 6-4ರಲ್ಲಿ ಗೆಲುವು ಸಾಧಿಸಿದರು. 2ನೇ ಸಿಂಗಲ್ಸ್‌ನಲ್ಲಿ ಕರ್ನಾಟಕದ ನಂ.1 ಆಟಗಾರ ಪ್ರಜ್ವಲ್‌ ದೇವ್‌ಗೂ ಆಘಾತ ಎದುರಾಯಿತು. ಅವರು ತಾರಾ ಆಟಗಾರ ಮನೀಶ್‌ ಸುರೇಶ್‌ಕುಮಾರ್‌ ವಿರುದ್ಧ 7-5, 4-6, 4-6 ಸೆಟ್‌ಗಳಲ್ಲಿ ವೀರೋಚಿತ ಸೋಲು ಕಂಡರು.

Also Read  ಸೆಪ್ಟಂಬರ್ 21 ರಿಂದ ಶಾಲೆ ತೆರೆದರೂ ತರಗತಿ ನಡೆಯಲ್ಲ.!!➤ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ

ಬೆಳ್ಳಿ ವಿಜೇತ ಕರ್ನಾಟಕ ತಂಡದಲ್ಲಿ ಪ್ರಜ್ವಲ್‌ ದೇವ್‌, ರಿಶಿ ರೆಡ್ಡಿ ಜೊತೆ ನಿಕಿ ಪೂನಚ್ಚ, ಆದಿಲ್‌ ಕಲ್ಯಾಣ್‌ಪುರ ಹಾಗೂ ಮನೀಶ್‌ ಜಿ. ಇದ್ದರು. ಈ ತಂಡ ಸೆಮಿಫೈನಲ್‌ನಲ್ಲಿ ತೆಲಂಗಾಣ ವಿರುದ್ಧ ಗೆದ್ದಿತ್ತು. ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಸೋತು ಹೊರಬಿದ್ದಿತ್ತು.

error: Content is protected !!
Scroll to Top