16000 ಶಿಕ್ಷಕರ ನೇಮಕಾತಿಯ ಬಿಗ್ ಅಪ್ಡೇಟ್ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ!

(ನ್ಯೂಸ್ ಕಡಬ) newskadaba.com , ಫೆ.07. ದಾವಣಗೆರೆರಾಜ್ಯದಲ್ಲಿ ಈಗಾಗಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಶೀಘ್ರವಾಗಿ ಕಲ್ಯಾಣ ಕರ್ನಾಟಕದ 6 ಸಾವಿರ ಸೇರಿದಂತೆ ರಾಜ್ಯದಲ್ಲಿ 16 ಸಾವಿರ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾಥಮಿಕ ಶಾಲೆಗಳಿಗೆ 13 ಸಾವಿರ  ಶಿಕ್ಷರರನ್ನು ನೇಮಿಸಿದ್ದೇವೆ. ಈ ಬಾರಿ 16 ಸಾವಿರ ಶಿಕ್ಷಕರ  ಜೊತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ  6 ಸಾವಿರ ಹುದ್ದೆಗಳನ್ನು ಶೀಘ್ರದಲ್ಲಿ ತುಂಬುತ್ತೇವೆ. ನಮ್ಮ ಶಾಲೆ ನಮ್ಮ ಜವಬ್ಧಾರಿ ಸ್ಕೀಮ್ ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕಾಗಿ 39 ಸಾವಿರ ವಾಟ್ಸಪ್ ಗ್ರೂಪ್ ಗಳನ್ನು ನಾವು ಮಾಡಿದ್ದೇವೆ. 5 ಸಾವಿರ ರೂ.ನಿಂದ 5 ಕೋಟಿಯವರಗೂ ಅನುದಾನ ಬಂದಿದೆ. ಏಷ್ಯನ್ ಡೆವಲಪಪ್‌ಮೆಂಟ್ ಬ್ಯಾಂಕ್ (ಎಡಿಬಿ ಬ್ಯಾಂಕ್) ಇತರ ಮೂಲಗಳಿಂದ ಅನುದಾನ ಬರುತ್ತಿದೆ. ಈ‌ ಬಜೆಟ್‌ನಲ್ಲಿ 5000 ಹೊಸ ಕೊಠಡಿಗಳನ್ನು ನಿರ್ಮಿಸಲು ಬೇಡಿಕೆ ಇಟ್ಟಿದ್ದೇವೆ. ಸರ್ಕಾರ ಸಹಭಾಗಿತ್ವ ಹಾಗೂ ಜನಪ್ರತಿನಿಧಿಗಳ ಭಾಗಿತ್ವದಲ್ಲಿ ಸರ್ಕಾರಿ ಶಾಲೆ ಉತ್ತಮ ಪಡಿಸುತ್ತೇವೆ ಎಂದು ಮಾಹಿತಿ ನೀಡಿದರು.

Also Read  ದ.ಕ. ಮತ್ತು ಉಡುಪಿ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿಗಳಾಗಿ ಬಿಟ್ಟಿವೆ ➤  ಸಿದ್ದರಾಮಯ್ಯ ಆರೋಪ

error: Content is protected !!
Scroll to Top