ಖ್ಯಾತ ಬಹುಭಾಷ ನಟಿ ಪುಷ್ಪಲತಾ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಫೆ.05. ಚೆನ್ನೈ: ಖ್ಯಾತ ಬಹುಭಾಷ ನಟಿ ಪುಷ್ಪಲತಾ (87) ವಯೋಸಹಜ ಕಾಯಿಲೆಯಿಂದ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ.

ನಿರ್ದೇಶಕ ಎವಿಎಂ ರಾಜನ್ ಪತ್ನಿಯಾದ ಪುಷ್ಪಲತಾ ಅವರು 1958ರಲ್ಲಿ  ‘ ಸೆಂಗೊಟ್ಟೈ ಸಿಂಗಂ’ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. MGR, ಶಿವಾಜಿ ಗಣೇಶನ್ ಮೊದಲಾದ ಲೆಜೆಂಡರಿ ನಟರ ಜೊತೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ತಮಿಳು,ತೆಲುಗು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ. 1964ರಲ್ಲಿ ಲಕ್ಸ್ ಸೋಪ್ ಜಾಹೀರಾತಿನಲ್ಲಿ ಗಮನ ಸೆಳೆದಿದ್ದರು.

Also Read  ಸುಳ್ಯ ಆರೋಗ್ಯ ಇಲಾಖೆಯ ನೌಕರರಿಂದ ಪ್ರತಿಭಟನೆ ➤ ನಾಳೆಯಿಂದ ಅನಿರ್ಧಿಷ್ಟಾವದಿ ಮುಷ್ಕರಕ್ಕೆ ಕರೆ!

error: Content is protected !!
Scroll to Top