(ನ್ಯೂಸ್ ಕಡಬ) newskadaba.com, ಫೆ.01 ಗಾಜಿಯಾಬಾದ್ (ಉತ್ತರ ಪ್ರದೇಶ): ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಸರಣಿ ಸ್ಫೋಟ ಸಂಭವಿಸಿರುವ ಘಟನೆಯೊಂದು ಗಾಜಿಯಾಬಾದ್ ಜಿಲ್ಲೆಯ ದೆಹಲಿ-ವಜೀರಾಬಾದ್ ರಸ್ತೆಯ ಭೋಪುರ ಚೌಕ್‌ನಲ್ಲಿ ನಡೆದಿದೆ.
ಬೆಳಿಗ್ಗೆ 4 ಗಂಟೆ ಸುಮಾರಿಗೆ ಟ್ರಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಟ್ರಕ್ ನಲ್ಲಿದ್ದ 60ಕ್ಕೂ ಹೆಚ್ಚು ಅಡುಗೆ ಅನಿಲದ ಸಿಲಿಂಡರ್ ಗಳು ಸ್ಫೋಟ ಗೊಳ್ಳಲು ಆರಂಭಿಸಿವೆ. ಪರಿಣಾಮ ಸ್ಥಳದಲ್ಲದಿಂದ 4 ಪೀಠೋಪಕರಣಗಳ ಅಂಗಡಿಗಳು ಹಾಗೂ ಕೆಲವು ವಾಹನಗಳು ಸುಟ್ಟು ಕರಕಲಾಗಿದವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 90 ನಿಮಿಷಗಳ ಕಾಲ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಲು ಎಂದು ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ರಾಹುಲ್ ಕುಮಾರ್ ಅವರು ಹೇಳಿದ್ದಾರೆ.
ಸ್ಥಳಕ್ಕೆ ತೆರಳಿದಾಗ ಭಾರೀ ದಟ್ಟ ಹೊಗೆ ಆವರಿಸಿರುವುದು ಕಂಡು ಬಂದಿತ್ತು. ಸ್ಫೋಟದ ಶಬ್ಧ ಕೇಳಿ ಬರುತ್ತಿತ್ತು. ಹೀಗಾಗಿ ಟ್ರಕ್ ಬಳಿಗೆ ಹೋಗಲು ಸಾಧ್ಯವಾಗಲಿಲ್ಲ. ಸಿಲಿಂಡರ್ ಸ್ಫೋಟದ ಶಬ್ದವು ಸುತ್ತಮುತ್ತಲ ಪ್ರದೇಶದ ಹಲವಾರು ಕಿಲೋಮೀಟರ್‌ಗಳವರೆಗೆ ಕೇಳಿಬರುತ್ತಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಕಂಡಿ ಬಂದಿಲ್ಲ. ಸ್ಫೋಟದ ತೀವ್ರತೆಗೆ ಹೆದರಿದ ಜನರು ಆತಂಕಗೊಂಡು ಸ್ಥಳದಿಂದ ಓಡಲು ಆರಂಭಸಿದ್ದರು. ಇದೀಗ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.