ಕಾರ್ಕಳ: ಹೂಡಿಕೆ ಮಾಡಿದ 66,27,634ರೂ. ವಾಪಾಸ್ಸು ನೀಡದೆ ವಂಚನೆ; ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com, ಫೆ.01 ಹೊಸದಿಲ್ಲಿ : ಹೂಡಿಕೆ ಮಾಡಿದ 66,27,634ರೂ. ಹಣ ವಾಪಾಸ್ಸು ನೀಡದೆ ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಯ್ ಹಾಗೂ ಮತ್ತಿತರರು 2024ರ ಆ.6ರಂದು ರಾಜೇಶ್ವರಿ ಎಂಬುವವರಿಗೆ ಕರೆ ಮಾಡಿದ್ದು, ಗೋಲ್ಡ್ ಮೈನಿಂಗ್ ಟ್ರೇಡಿಂಗ್‌ಗೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿದ್ದರು.

ಅವರ ಮಾತುಗಳನ್ನು ನಂಬಿದ ರಾಜೇಶ್ವರಿ ಒಟ್ಟು 66,27,634ರೂ. ಹಣವನ್ನು ಆರೋಪಿತರ ಬೇರೆ ಬೇರೆ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಆದರೆ ಆರೋಪಿಗಳು ಆ ಹಣವನ್ನು ವಾಪಾಸ್ಸು ನೀಡದೇ ವಂಚಿಸಿರುವುದಾಗಿ ದೂರು ನೀಡಲಾಗಿದೆ.

Also Read  ಮಹಿಳಾ ಬೀದಿ ನಾಟಕ, ಸಂಗೀತ ಕಲಾ ತಂಡಗಳಿಂದ ಅರ್ಜಿ ಆಹ್ವಾನ

error: Content is protected !!
Scroll to Top