ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ನಿಂದಿಸಿದ ಆರೋಪ ಕೇಸ್: ಸಿ.ಟಿ.ರವಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

(ನ್ಯೂಸ್ ಕಡಬ) newskadaba.com ಜ.28: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ನಿಂದಿಸಿದ ಆರೋಪ ಪ್ರಕರಣದಲ್ಲಿ ಸಿ.ಟಿ.ರವಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈ ಕೇಸ್ ಸಂಬಂಧ ಸಿ.ಟಿ.ರವಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶಿಸಿದೆ.

ಪ್ರಕರಣ ರದ್ದು ಕೋರಿ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿದೆ. ಈ ಮಧ್ಯೆ, ಸಿಐಡಿ ತಂಡ ತನಿಖೆ ಭಾಗವಾಗಿ ಸ್ಥಳ ಮಹಜರಿಗೆ ಮತ್ತೊಮ್ಮೆ ಪ್ರಯತ್ನ ನಡೆಸಲು ಮುಂದಾಗಿದೆ. ಇದಕ್ಕೆ ಸಭಾಪತಿಗಳು ಗರಂ ಆಗಿದ್ದು, ಪ್ರಕರಣವನ್ನು ಎಥಿಕ್ಸ್ ಕಮಿಟಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ಸಿಐಡಿ ತನಿಖೆಯನ್ನು ಪ್ರಶ್ನಿಸಿದ್ದಾರೆ.

Also Read  ನಾಲ್ಕು ರಾಜ್ಯದ ಜನರಿಗೆ ಪ್ರವೇಶವಿಲ್ಲ: ಬಿಎಸ್‌ವೈ

ಈ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ ಅವರು, ನ್ಯಾಯಾಲಯಕ್ಕೂ ಸಹ ಶಾಸಕಾಂಗಕ್ಕೆ ಆದೇಶ ನೀಡುವ ಅಧಿಕಾರ ಇಲ್ಲ. ಇಂತಹದರಲ್ಲಿ ನೀವು ಯಾವ ಆಧಾರದ ಮೇಲೆ ಸಿಐಡಿ ತನಿಖೆ ಪ್ರಕರಣ ನೀಡಿದ್ದೀರಿ? ಯಾವ ರೀತಿ ಸ್ಥಳ ಮಹಜರು ಮಾಡುತ್ತೀರಿ ಅಂತ ಸಿಐಡಿಗೆ ಪ್ರಶ್ನೆ ಮಾಡಿದ್ದೇನೆ? ಆದರೆ, ಇಲ್ಲಿಯವರೆಗೆ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ಸದನ ಎಥಿಕ್ಸ್ ಕಮಿಟಿಗೆ ಪ್ರಕರಣ ವರ್ಗಾವಣೆ ಮಾಡಿದ್ದೇನೆ ಎಂದಿದ್ದಾರೆ.

error: Content is protected !!
Scroll to Top