ಬಿಳಿನೆಲೆ ಪ್ರೌಢಶಾಲೆಗೆ ಧರ್ಮಸ್ಥಳ ಯೋಜನೆಯಿಂದ ಡೆಸ್ಕ್ ಮತ್ತು ಬೆಂಚ್ ವಿತರಣೆ ಗುಣಮಟ್ಟದ ವಿದ್ಯಾರ್ಜನೆಗೆ ಪೂಜ್ಯರು ನೀಡಿದ ಡೆಸ್ಕ್ ಬೆಂಚ್ ಸಹಕಾರಿ- ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಜ. 23. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಬಿಳಿನೆಲೆ ವಲಯ ಇದರ ವತಿಯಿಂದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಗೆ 10 ಜೊತೆ ಬೆಂಚು ಹಾಗೂ ಡೆಸ್ಕುಗಳನ್ನು ಹಸ್ತಾಂತರಿಸಲಾಯಿತು.

ಬಿಳಿನೆಲೆ ವಲಯ ಮೇಲ್ವಿಚಾರಕರಾದ ರವಿಪ್ರಸಾದ್ ಆಲಾಜೆ ಇವರು ಗೋಪಾಲಕೃಷ್ಣ ಪ್ರೌಡಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಶರ್ಮ ಹಾಗೂ ಶಾಲಾ ಮುಖ್ಯ ಗುರುಗಳಾದ ಶ್ರೀ ಸತ್ಯ ಶಂಕರ ಭಟ್ ಇವರಿಗೆ ಡೆಸ್ಕ್ ಬೆಂಚ್ ಹಸ್ತಾಂತರಿಸಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃಧ್ಧಿ ಯೋಜನೆಯ ಮೂಲಕ ಸಮುದಾಯದ ಅಭಿವೃದ್ಧಿ ಚಟುವಟಿಕೆಗಳಿಗೆ ಮೂಲಸೌಕರ್ಯವನ್ನು ಪೂರೈಸಿಕೊಳ್ಳಲು ಸಮುದಾಯ ಅಭಿವೃದ್ದಿ ಕಾರ್ಯಕ್ರಮಗಳ ಮೂಲಕ ಅನೇಕ ಸೌಲಭ್ಶಗಳನ್ನು ಒದಗಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಗೋಪಾಲಕೃಷ್ಣ ಪ್ರೌಢಶಾಲೆಗೆ ಹತ್ತು ಡೆಸ್ಕ್ ಬೆಂಚುಗಳನ್ನು ನೀಡಿದ್ದು ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವಲ್ಲಿ ಇದು ಪೂರಕವಾಗಲಿ ಎಂದರು.

Also Read  ಅ.05: ಬಿಜೆಪಿ ಎಸ್ಸಿ ಮೋರ್ಛಾ ವತಿಯಿಂದ ಬೃಹತ್ ಸಮರ್ಥನಾ ಸಮಾವೇಶ ► ಮರ್ಧಾಳ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ

ಈ ಸಂದರ್ಭದಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾರದಾ ದಿನೇಶ್, ಬಿಳಿನೆಲೆ ವಲಯ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಗೋಪಾಲಕೃಷ್ಣ ಬಿ, ಶ್ರೀಮತಿ ಶಾರದಾ , ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಬಿಳಿನೆಲೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸತೀಶ್, ಬಿಳಿನೆಲೆ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತಿ, ಜೊತೆ ಕಾರ್ಯದರ್ಶಿ ಲಕ್ಷ್ಮಣ ಸಣ್ಣಾರ ವೇದವ್ಯಾಸ ವಿದ್ಯಾಲಯದ ಮುಖ್ಯ ಗುರುಗಳಾದ ಪ್ರಶಾಂತ್ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರುಗಳಾದ ಸತ್ಯಶಂಕರ್ ಸ್ವಾಗತಿಸಿದರು. ಚಿತ್ರಕಲಾ ಅಧ್ಯಾಪಕರಾದ ದಿನೇಶ್ ಕುಂದರ್ ವಂದಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top