(ನ್ಯೂಸ್ ಕಡಬ) newskadaba.com ಜ.22 : ಕಲಬುರಗಿ : ಪ್ರತಿಕ್ವಿಂಟಾಲ್‍ತೊಗರಿಗೆ ರೂ.12500 ಧಾರಣೆ ನೀಡಬೇಕುಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡುಕರ್ನಾಟಕ ಪ್ರಾಂತರೈತ ಸಂಘ ಹಾಗೂ ಅಖಿಲ ಭಾರತಕಿಸಾನ್ ಸಭಾಸೇರಿದಂತೆ ಹಲವು ರೈತಪರ ಸಂಘಟನೆಗಳು ಕರೆದಿದ್ದ ಕಲಬುರಗಿ ಬಂದ್‍ಗೆಇಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂಜಾನೆ ಸುಮಾರು 5ರ ಹೊತ್ತಿಗೆ ಬಂದ್‍ಆರಂಭಗೊಂಡಿದ್ದರಿಂದ ಆ ಸಮಯಕ್ಕೂ ಮೊದಲುಕೇಂದ್ರ ಬಸ್ ನಿಲ್ದಾಣದಿಂದ ಹೊರರಾಜ್ಯ ಮತ್ತುಅನ್ಯ ಜಿಲ್ಲೆಗಳಿಗೆ ಹೊರಡಬೇಕಿದ್ದ ಸಾರಿಗೆಇಲಾಖೆಯ ಬಸ್‍ಗಳುಅದಕ್ಕೂ ಮುಂಚೆ ನಿರ್ಗಮಿಸಿದ್ದು ಬಿಟ್ಟರೆ ಉಳಿದಂತೆ ಬಸ್ ಸಂಚಾರ ಸ್ಥಗಿತಗೊಂತ್ತು.ಇನ್ನುಳಿದಂತೆ ನಗರದ ನಾಲ್ಕೂ ದಿಕ್ಕುಗಳಲ್ಲಿ ಇರುವ ವರ್ತುಲ ರಸ್ತೆಗಳಿಂದಲೇ ಬಸ್‍ಗಳನ್ನು ಕಲ್ಯಾಣಕರ್ನಾಟಕರಸ್ತೆ ಸಾರಿಗೆ ಸಂಸ್ಥೆ ಕಾರ್ಯಾಚರಣೆ ಮಾಡಿದ್ದು ವಿಶೇಷವಾಗಿತ್ತು.
ಮತ್ತೊಂದೆಡೆ, ನಗರದಲ್ಲಿ ನಗರ ಸಾರಿಗೆ ನೃಪತುಂಗ ಬಸ್‍ಗಳು ಮಧ್ಯಾಹ್ನದವರೆಗೆ ರಸ್ತೆಗಿಳಿಯಲಿಲ್ಲ. ಹೀಗಾಗಿ, ಕಲಬುರಗಿ ನಗರ ಹಾಗೂ ನಗರದ ನೆರೆಹೊರೆಯ ಗ್ರಾಮಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಆಟೋರಿಕ್ಷಾಗಳಲ್ಲಿ ನಿಗದಿಗಿಂತಲೂ ಹೆಚ್ಚಿನದರ ಪಾವತಿಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಕೇಂದ್ರ ಬಸ್ ನಿಲ್ದಾಣದಎದುರಿನಅಂಗಡಿ ಮುಂಗಟ್ಟು ಮತ್ತು ಹೋಟೆಲ್‍ಗಳು ಬಂದ್‍ಆರಂಭಗೊಂಡ ಕೆಲಹೊತ್ತು ಮುಚ್ಚಿದ್ದವಾದರೂ ನಂತರಯಥಾವತ್ತಾಗಿಕಾರ್ಯನಿರ್ವಹಿಸಿದವು.ಅಲ್ಲಲ್ಲಿ ಪ್ರತಿಭಟನಾಕಾರರುಅಂಗಡಿ-ಮುಂಗಟ್ಟು ಹೋಟೆಲ್ ಮುಚ್ಚುವಂತೆ ಮನವಿ ಮಾಡಿಕೊಳ್ಳುತ್ತಿದ್ದುದು ಕಂಡುಬಂದಿತಾದರೂ, ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜೇವರ್ಗಿಕ್ರಾಸ್, ಶಹಾಬಜಾರ್ ಕಾಲೊನಿ, ಆಳಂದ ಕಾಲೊನಿ, ಖರ್ಗೆ ಪೆಟ್ರೋಲ್ ಬಂಕ್, ಸ್ಟೇಷನ್ ಬಜಾರ್ ಪ್ರದೇಶದಲ್ಲಿಅಂಗಡಿ-ಮುಂಗಟ್ಟುಗಳು ಎಂದಿನಂತೆತಮ್ಮ ವಹಿವಾಟು ನಡೆಸಿದವು.