ಬಾಹ್ಯಾಕಾಶದಿಂದ ಮಹಾ ಕುಂಭಮೇಳದ ಫೊಟೋ ಬಿಡುಗಡೆ ಮಾಡಿದ ಇಸ್ರೋ

(ನ್ಯೂಸ್ ಕಡಬ) newskadaba.com ಜ.22 : ಬಾಹ್ಯಾಕಾಶದಿಂದ ಕಾಣಿಸುವ ಮಹಾ ಕುಂಭಮೇಳದ ಸ್ಥಳದ ಫೋಟೋಗಳನ್ನು ಇಸ್ರೋ ಬಿಡುಗಡೆ ಮಾಡಿದೆ. ಭಾರತದ ಅತ್ಯಾಧುನಿಕ ಆಪ್ಟಿಕಲ್ ಉಪಗ್ರಹಗಳು ಮತ್ತು ಹಗಲು ರಾತ್ರಿ ವೀಕ್ಷಿಸುವ ಸಾಮರ್ಥ್ಯವಿರುವ ರಾಡಾರ್‌ಸ್ಯಾಟ್ ಬಳಸಿ ಈ ಫೋಟೋಗಳನ್ನು ತೆಗೆಯಲಾಗಿದೆ. ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಮಹಾ ಕುಂಭಮೇಳದ ಚಿತ್ರಗಳ ಸರಣಿಯನ್ನು ಉಪಗ್ರಹದಿಂದ ರಿಸೀವ್‌ ಮಾಡಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ NRSC ನಿರ್ದೇಶಕ ಡಾ. ಪ್ರಕಾಶ್ ಚೌಹಾಣ್, ಪ್ರಯಾಗ್‌ರಾಜ್ ಮೇಲೆ ಆವರಿಸಿರುವ ಕ್ಲೌಡ್ ಬ್ಯಾಂಡ್ ಮೂಲಕ ಪ್ರದೇಶವನ್ನು ಚಿತ್ರಿಸಲು ಸಾಧ್ಯವಾಗುವಂತೆ ರಾಡಾರ್‌ಸ್ಯಾಟ್‌ನ್ನು ಬಳಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Also Read  ಮಿಲಿಟರಿ ಸ್ಟೇಷನ್ ಮೇಲೆ ಗುಂಡಿನ ದಾಳಿ ಪ್ರಕರಣ ➤ ಯೋಧನ ಬಂಧನ

ಈ ಬಾರಿ ಉಪಗ್ರಹ ತೆಗೆದ ಚಿತ್ರಗಳಲ್ಲಿ ಹೊಸ ಶಿವಾಲಯ, ಉದ್ಯಾನವನ ಸೆರೆಯಾಗಿದೆ. ಇನ್ನೂ 2024ರ ಏ.6ರ ಚಿತ್ರವು ಸ್ಪಷ್ಟವಾದ ಮೈದಾನವನ್ನು ತೋರಿಸುತ್ತದೆ. ಈ ವರ್ಷ ಡಿಸೆಂಬರ್‌ನಲ್ಲಿ ತೆಗೆದ ಚಿತ್ರದಲ್ಲಿ ಮಹಾ ಕುಂಭಮೇಳದ ಸಿದ್ಧತೆಗಳನ್ನು ನೋಡಬಹುದಾಗಿದೆ.

error: Content is protected !!
Scroll to Top