(ನ್ಯೂಸ್ ಕಡಬ) newskadaba.com ಜ.22 : ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಪ್ರಸಿದ್ಧ ಲೇಖಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುದಾ ಮೂರ್ತಿ ಅವರು ಪವಿತ್ರ ಸ್ನಾನವನ್ನು ನೆರವೇರಿಸಿದರು. ಅವರು ಪವಿತ್ರ ಕುಂಭಮೇಳದ ಪಾವನ ವಾತಾವರಣದಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು.
ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಪಾವಿತ್ರ್ಯಮಯ ಸರಸ್ವತಿ ನದಿಗಳ ಸಂಗಮದಲ್ಲಿ ಆಯೋಜಿಸಲಾಗಿರುವ ಮಹಾಕುಂಭ ಮೇಳವು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ವೇಳೆ ಸುದಾ ಮೂರ್ತಿ ಅವರು ತನ್ನ ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡು, ಪೂರ್ವಜರಿಗೆ ತರ್ಪಣ ಮತ್ತು ಹೋಮ ನಡೆಸಿದರು.
ಸ್ನಾನ ನಂತರ ಮಾತನಾಡಿದ ಸುದಾ ಮೂರ್ಥಿ, “ಈ ಪವಿತ್ರ ಜಾಗದಲ್ಲಿ ಸ್ನಾನ ಮಾಡುವ ಅವಕಾಶ ನನಗೆ ದೊರೆತಿದ್ದು ಅದೃಷ್ಟವಾಗಿದೆ. ನನ್ನ ಪಿತೃಗಳಿಗೆ ವಿಧಿ ಕಾರ್ಯಗಳನ್ನು ನೆರವೇರಿಸಲು ನನ್ನ ಕುಟುಂಬದೊಂದಿಗೆ ಇಲ್ಲಿ ಬಂದಿದ್ದೇನೆ. ಮುಂದೆಯೂ ಪುನಃ ಇಲ್ಲಿಗೆ ಭೇಟಿ ನೀಡುವ ಇಚ್ಛೆ ನನ್ನಲ್ಲಿದೆ,” ಎಂದು ಹೇಳಿದರು.