ಬೆಂಗಳೂರು: ಪ್ರಯಾಣಿಕರಿಗೆ ಮತ್ತೊಂದು ಹೊರೆ !ಮೆಟ್ರೋ ಪ್ರಯಾಣ ದರ ಶೇ.43ರಷ್ಟು ಏರಿಕೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಜ.18 ಮಂಗಳೂರು: ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಪ್ರಯಾಣ ದರ ಹೆಚ್ಚಳದ ನಂತರ ಇದೀಗ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತಿದ್ದು, ಪ್ರಯಾಣಿಕರಿಗೆ ಮತ್ತೊಂದು ಹೊರೆಯಾಗಿದೆ. ಮೂಲಗಳ ಪ್ರಕಾರ ನಮ್ಮ ಮೆಟ್ರೋ ಸುಮಾರು ಶೇ. 43 ರಷ್ಟು ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಜನದಟ್ಟಣೆ ಇಲ್ಲದ ಸಮಯದಲ್ಲಿ ಮೆಟ್ರೋ ಪ್ರಯಾಣದ ಟೋಕನ್ ಬಳಸುವ ಪ್ರಯಾಣಿಕರಿಗೆ ಈ ದರದಲ್ಲಿ ಶೇ. 5 ರಷ್ಟು ರಿಯಾಯಿತಿ ಇರಲಿದೆ. ಪ್ರಸ್ತುತ ಕನಿಷ್ಠ ದರ ರೂ. 10 ಮತ್ತು ಗರಿಷ್ಠ ದರ ರೂ. 60 ಆಗಿದೆ. ಟ್ರಾವೆಲ್ ಕಾರ್ಡ್ ಬಳಕೆದಾರರಿಗೆ ಅದರ ಮೇಲೆ ಶೇ. 5 ರಷ್ಟು ರಿಯಾಯಿತಿ ಇದೆ.

Also Read  ಕರ್ನಾಟಕ ಬಂದ್: ಬೆಂಗಳೂರಿನಲ್ಲಿ ಪೊಲೀಸರ ಕಟ್ಟೆಚ್ಚರ; ಸ್ಯಾಟಲೈಟ್, ಮೆಜೆಸ್ಟಿಕ್‌ನಲ್ಲಿ ತಗ್ಗಿದ ಪ್ರಯಾಣಿಕರ ಸಂಖ್ಯೆ -ಹಲವೆಡೆ ನೀರಸ ಪ್ರತಿಕ್ರಿಯೆ

ಶುಕ್ರವಾರ ದರ ನಿಗದಿ ಸಮಿತಿಯ ಶಿಫಾರಸುಗಳ ಕುರಿತು ಮಾತನಾಡಿದ BMRCL ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್‌ ರಾವ್‌ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದ ವಿವರಗಳನ್ನು ಶನಿವಾರ ಬಹಿರಂಗಗೊಳಿಲು ಮೆಟ್ರೋ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್, ಮೆಟ್ರೋ ಪ್ರಯಾಣ ದರವನ್ನು ಶೇ, 45 ರಷ್ಟು ಏರಿಕೆ ಮಾಡಲಾಗುವುದು ಅನಿಸುತ್ತಿದೆ ಎಂದಿದ್ದಾರೆ. ಪ್ರಯಾಣ ದರ ಹೆಚ್ಚಳವನ್ನು ಮೆಟ್ರೋ ಸಮರ್ಥಿಸಿಕೊಂಡಿದೆ. ಎಂಟು ವರ್ಷಗಳ ನಂತರ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಿಸಲಾಗುತ್ತಿದೆ. ರೈಲ್ವೆ ಜಾಲ ವಿಸ್ತರಣೆಯಾಗಿದ್ದು, ಕಾರ್ಯಾಚರಣೆ ವೆಚ್ಚ ಹೆಚ್ಚಾಗಿದೆ. ಸಮಿತಿಯ ಶಿಫಾರಸುಗಳು ಬದ್ಧವಾಗಿವೆ. ಈ ಹಿಂದೆ ಜೂನ್ 18, 2017 ರಂದು ಪ್ರಯಾಣ ದರವನ್ನು ಶೇ. 10 ರಿಂದ 15 ರಷ್ಟು ಹೆಚ್ಚಳ ಮಾಡಲಾಗಿತ್ತು ಎಂದು ಹೇಳಿದೆ.

Also Read  ಒಂದು ಗ್ಲಾಸ್ ಬಿಸಿ ನೀರಿಲ್ಲದೆ 2ಗಂಟೆ ತಡವಾಗಿ ಔಷಧಿ ಸೇವಿಸಿದ ಮಾಜಿ ಪ್ರಧಾನಿ!

error: Content is protected !!
Scroll to Top