ತಾರಸಿಯಿಂದ ಬಿದ್ದು ವಿದ್ಯಾರ್ಥಿ ದಾರುಣ ಸಾವು

(ನ್ಯೂಸ್ ಕಡಬ) newskadaba.com ಮಣಿಪಾಲ: ಮಣಿಪಾಲದ ಖಾಸಗಿ ಸಂಸ್ಥೆಯೊಂದರ ಮೂರನೇ ವರ್ಷದ ಬಿಕಾಂ ವಿದ್ಯಾರ್ಥಿಯೊಬ್ಬ ಸಂಗೀತ ಕೇಳುತ್ತಾ ತಾರಸಿಯ ಗೋಡೆಯಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ವಿದ್ಯಾರ್ಥಿ ಕಾರ್ತಿಕ್ (21) ಮೃತ ದುರ್ದೈವಿ. ಉಡುಪಿಯ ಬಡಗುಬೆಟ್ಟು ಗ್ರಾಮದ ನಿವಾಸಿ ರಶ್ಮಿತಾ (27) ಎಂಬುವರು ನೀಡಿದ ದೂರಿನಂತೆ ಅವರ ಕಿರಿಯ ಸಹೋದರ ಕಾರ್ತಿಕ್ ದಾರುಣವಾಗಿ ಸಾವನ್ನಪ್ಪಿದ್ದಾನೆ. ಕಾರ್ತಿಕ್‌ಗೆ ಅಧ್ಯಯನದ ನಂತರ ಸಂಗೀತ ಕೇಳುವುದು ಅಭ್ಯಾಸವಿತ್ತು ಎಂದು ಅವರು ತಿಳಿಸಿದ್ದಾರೆ.

ಜನವರಿ 12 ರಂದು, ರಾತ್ರಿ ಊಟದ ನಂತರ, ಕಾರ್ತಿಕ್ ತನ್ನ ಮೊಬೈಲ್ ಫೋನ್‌ನೊಂದಿಗೆ ಅವರ ಮನೆಯ ಮೇಲಿನ ಮಹಡಿಗೆ ಹೋಗಿದ್ದಾರೆ. ತಾರಸಿಯ ಅಂಚಿನಲ್ಲಿ ಕುಳಿತು ಸಂಗೀತ ಕೇಳುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಆತನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಕಾರ್ತಿಕ್‌ಗೆ ಗಂಭೀರ ಗಾಯಗಳಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಜನವರಿ 16ರಂದು ಕೊನೆಯುಸಿರೆಳೆದಿದ್ದಾರೆ. ಇನ್ನು ಈ ಬಗ್ಗೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.

Also Read  ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

error: Content is protected !!
Scroll to Top