(ನ್ಯೂಸ್ ಕಡಬ)com ಜ.15: ಟಿಪ್ಪರ್ ವೊಂದರಲ್ಲಿ ಮರಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಲು ಮುಂದಾಗಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಆರೋಪಿಯೊಬ್ಬನನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಕುಕ್ಕುಂದೂರು ಜಯಂತಿನಗರದ ಸೈಯದ್ ಸೈಫ್( 22) ಬಂಧಿತ ಆರೋಪಿ. ಪ್ರತಿಷ್ಠಿತ ಮನೆತನದ ಈತ ಅಮಲು ಪದಾರ್ಥ ಸೇವನೆ ಚಟವೊಂದಿದ್ದು, ಮಣಿಪಾಲ ಪ್ರತಿಷ್ಠಿತ ಕಾಲೇಜಿನ ಬಿ ಫಾರ್ಮಸಿಯ ವಿದ್ಯಾರ್ಥಿಯಾಗಿದ್ದಾನೆ. ಈತನನ್ನು ಕಾರ್ಕಳ ನಗರ ಠಾಣಾಧಿಕಾರಿ ಶಿವಕುಮಾರ್ ಬಂಧಿಸಿದ್ದಾರೆ. ಮರಳು ಕಳವು ಹಾಗೂ ಪೊಲೀಸರ ಕರ್ತವ್ಯ ಅಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಕುಕ್ಕುಂದೂರು ಜಯಂತಿನಗರದ ಸೈಯದ್ ಸೈಫ್( 22)ನನ್ನು ಪೊಲೀಸರು ದಸ್ತಗಿರಿ ಮಾಡಿದರು.
ಆ ಸಂದರ್ಭದಲ್ಲಿ ಆರೋಪಿ ಸೈಯದ್ ಸೈಫ್ ಯಾವುದೋ ಅಮಲು ಪದಾರ್ಥ ಸೇವಿಸಿದಂತೆ ವರ್ತನೆ ಮಾಡುತ್ತಿದ್ದನು. ಅನುಮಾನಗೊಂಡ ಪೊಲೀಸರು ಆತನನ್ನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ಪರೀಕ್ಷಿಸಿ ನಡೆಯಿಸಿ ದೃಡಪತ್ರ ನೀಡುವಂತೆ ಕೋರಿ ಜ. 14 ರಂದು ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದರು. ವೈದ್ಯಕೀಯ ವರದಿಯಂತೆ ಆರೋಪಿ ಸೈಯದ್ ಸೈಫ್ ಮಾದಕ ಹಾಗೂ ಮನೋದ್ರೇಕಕಾರಿ ವಸ್ತು ಗಾಂಜಾದ ಉತ್ಪನ್ನವಾದ ಟೆಟ್ರಾ ಹೈಡ್ರೋ ಕ್ಯಾನ್ ಬಿಲ್ ಪದಾರ್ಥ ಸೇವಿಸಿರುವುದು ದೃಢಪಟ್ಟಿರುವುದಾಗಿ ತಿಳಿದುಬಂದಿದೆ.