ಹಿರಿಯ ನಟ ಸರಿಗಮ ವಿಜಿ ನಿಧನ

(ನ್ಯೂಸ್ ಕಡಬ) newskadaba.com ಜ.15 :  ಕನ್ನಡ ಚಿತ್ರರಂಗ ಮತ್ತು ಟಿವಿ ಲೋಕದ ಹಿರಿಯ ನಟ ಸರಿಗಮ ವಿಜಿ (76) ಅವರು ಇಂದು ಬೆಳಿಗ್ಗೆ 9:45ಕ್ಕೆ ನಿಧನರಾದರು. ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಯಶಂಪುರದ ಖಾಸಗಿ ಆಸ್ಪತ್ರೆಯಲ್ಲಿ ನ್ಯುಮೋನಿಯಾ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

Nk Cake House

ವಿಜಿ ಅವರ ನಾಟಕ ‘ಸಂಸಾರದಲ್ಲಿ ಸರಿಗಮ’ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿದ್ದು, ಅದರಿಂದಲೇ ‘ಸರಿಗಮ ವಿಜಿ’ ಎಂಬ ಹೆಸರು ಪಡೆದರು. ಅವರು ‘ಬೆಳುವಲದ ಮಡಿಲಲ್ಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ, 269ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

80ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಹಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿ, ಕೆಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಅಂತ್ಯಕ್ರಿಯೆ ನಾಳೆ (ಜನವರಿ 16) ಬೆಳಿಗ್ಗೆ 10 ರಿಂದ 12 ಗಂಟೆಯ ನಡುವೆ ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿಯ ಚೀತಾಗಾರದಲ್ಲಿ ನಡೆಯಲಿದೆ.

Also Read  ಪಾದಚಾರಿಗೆ ಬೈಕ್ ಡಿಕ್ಕಿ

error: Content is protected !!
Scroll to Top