ಐಪಿಎಲ್ ಆರಂಭಕ್ಕೆ ಮುಹೂರ್ತ ಫಿಕ್ಸ್, ಮಾರ್ಚ್ 21ಕ್ಕೆ ಉದ್ಘಾಟನಾ ಪಂದ್ಯ

(ನ್ಯೂಸ್ ಕಡಬ) newskadaba.com ಜ.14: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿ ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಐಪಿಎಲ್ ಆವೃತ್ತಿಯು ಮಾರ್ಚ್ 21ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿರುವುದಾಗಿ ಕ್ರಿಕ್‌ಬುಜ್ ವರದಿ ಮಾಡಿದೆ.

 

ಮುಂಬೈನಲ್ಲಿ ನಡೆದ ಬಿಸಿಸಿಐ ವಿಶೇಷ ಮಹಾಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶುಕ್ಲಾ, ಮೇ 21ರಂದು ಉದ್ಘಾಟನಾ ಪಂದ್ಯ ನಡೆಯಲಿದೆ ಮತ್ತು ಮೇ 25 ರಂದು ಅಂತಿಮ ಪಂದ್ಯ ನಡೆಯಲಿದೆ. WPL ಗಾಗಿ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಶೀಘ್ರದಲ್ಲೇ ಘೋಷಿಸಲಾಗುವುದು ಎಂದಿದ್ದಾರೆ.

Nk Cake House

ಬಿಸಿಸಿಐ ಸಭೆಯಲ್ಲಿ ಪ್ರಭ್ತೇಜ್ ಸಿಂಗ್ ಭಾಟಿಯಾರನ್ನು ಖಜಾಂಚಿಯನ್ನಾಗಿ ಮತ್ತು ದೇವಜಿತ್ ಸೈಕಿಯಾರನ್ನು ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಹಿಳೆಯರ ಪ್ರೀಮಿಯರ್ ಲೀಗ್ (WPL) ಪಂದ್ಯಗಳು ನಡೆಯುವ ಸ್ಥಳದ ಬಗ್ಗೆ ಬಹುತೇಕ ಅಂತಿಮಗೊಂಡಿದೆ ಎಂದು ಹೇಳಿದರು. ಐಪಿಎಲ್ ಒಂದು ವರ್ಷದ ಅವಧಿಗೆ ಹೊಸ ಆಯುಕ್ತರ ನೇಮಕವನ್ನು ಪ್ರಕಟಿಸಿದೆ. ಜನವರಿ 18-19 ರಂದು ನಡೆಯಲಿರುವ ಮುಂದಿನ ಸಭೆಯು ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಅಂತಿಮಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದರು.

error: Content is protected !!
Scroll to Top