(ನ್ಯೂಸ್ ಕಡಬ) newskadaba.com ಜ.14: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಖಂಬಾ ಕೋಟೆ ಸಮೀಪ ನೆಲಬಾಂಬ್ ಸ್ಫೋಟಗೊಂಡು ಕನಿಷ್ಠ ಆರು ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ 10:45ರ ಸುಮಾರಿಗೆ ಗಸ್ತು ಕರ್ತವ್ಯದಲ್ಲಿದ್ದ ಸೈನಿಕರೊಬ್ಬರು ಆಕಸ್ಮಿಕವಾಗಿ ನೆಲಬಾಂಬ್ ಮೇಲೆ ಹೆಜ್ಜೆ ಇಡಿದ ಪರಿಣಾಮ ಸ್ಫೋಟ ಸಂಭವಿಸಿದೆ. ಗಾಯಾಳು ಸೈನಿಕರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿಯ ಪ್ರದೇಶಗಳಲ್ಲಿ ಉಗ್ರರ ಒಳನುಸುಳುವಿಕೆಯನ್ನು ತಡೆಯಲು ಬಾಂಬ್‌ಗಳನ್ನು ಇರಿಸಲಾಗುತ್ತದೆ. ಆದರೆ, ಮಳೆ ಮತ್ತು ಇತರ ಪರಿಸ್ಥಿತಿಗಳಿಂದಾಗಿ ಈ ಬಾಂಬ್‌ಗಳು ಸ್ಥಳಾಂತರವಾಗುವುದರಿಂದ ಇಂತಹ ಅವಘಡಗಳು ಸಂಭವಿಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.