ಹಳಿ ತಪ್ಪಿದ ಮೆಮು ಪ್ಯಾಸೆಂಜರ್ ರೈಲು: ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

(ನ್ಯೂಸ್ ಕಡಬ) newskadaba.com ಜ.14 ಚೆನ್ನೈ, : ತಮಿಳುನಾಡಿನ ವಿಲ್ಲುಪುರಂನಿಂದ ಪುದುಚೇರಿಗೆ ಹೊರಟಿದ್ದ ಮೆಮು ಪ್ಯಾಸೆಂಜರ್ ರೈಲಿನ ಒಂದು ಭೋಗಿ ಇಂದು ವಿಲ್ಲುಪುರಂ ಬಳಿ ಹಳಿ ತಪ್ಪಿದ್ದು, ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ.

ಇಂದು ಬೆಳಿಗ್ಗೆ 5.25ರ ಸುಮಾರಿಗೆ ವಿಲ್ಲುಪುರಂ-ಪುದುಚೇರಿ ಮೆಮು ಪ್ಯಾಸೆಂಜರ್ ರೈಲು ಹೊರಟಿತ್ತು. ಸುಮಾರು 500 ಮಂದಿ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Nk Cake House

ರೈಲು ನಿಲ್ದಾಣದಿಂದ ಹೊರಟ ಕೆಲ ಸಮಯದ ನಂತರ ವಕ್ರರೇಖೆ ದಾಟುತ್ತಿದ್ದ ಸಂದರ್ಭ ರೈಲಿನ ಒಂದು ಭೋಗಿ ಹಳಿತಪ್ಪಿದೆ. ಇದನ್ನು ಗಮನಿಸಿದ ಲೊಕೊ ಪೈಲಟ್ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆಗೆ ಕಾರಣ ಏನೆಂಬುದು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತಿಳಿದು ಬರಬೇಕಿದೆ. ರೈಲು ಹಳಿ ತಪ್ಪಿದ ಕಾರಣ ವಿಲ್ಲುಪುರಂ ಮಾರ್ಗದಲ್ಲಿ ಬೆಳಿಗ್ಗೆ 8.30ರವರೆಗೆ ರೈಲು ಸಂಚಾರ ಸ್ಥಗಿತಗೊಂಡಿದ್ದು, ಬಳಿಕ ರೈಲು ಸಂಚಾರ ಪುನರಾರಂಭಿಸಲಾಯಿತು.

Also Read  ಬೆಳ್ಳಾರೆ: ಚೂರಿ ಇರಿತಕ್ಕೊಳಗಾದ ಯುವಕ ಮೃತ್ಯು..!!

error: Content is protected !!
Scroll to Top