(ನ್ಯೂಸ್ ಕಡಬ) newskadaba.com ಜ. 14. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದ ವತಿಯಿಂದ ಮಾಣಿ, ಅನಂತಾಡಿ, ನೇರಳಕಟ್ಟೆ, ಇಡ್ಕಿದು, ಅಳಕೆಮಜಲು ಹಾಗೂ ಬರಿಮಾರು ಸೇರಿದಂತೆ ವಲಯದ 7 ಶ್ರದ್ಧಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಧಾರ್ಮಿಕ ಪ್ರಜ್ಞೆ ಉಳಿಸಿಕೊಳ್ಳಲು ಶ್ರದ್ಧಾ ಕೇಂದ್ರಗಳು ಸಹಕಾರಿಯಾಗಿದ್ದು, ಸ್ವಚ್ಛತೆ ಇದ್ದಲ್ಲಿ ಭಕ್ತಿ ಬರಲು ಸಾಧ್ಯ. ಆದ್ದರಿಂದ ಪ್ರತಿ ವರ್ಷವೂ 2 ಬಾರಿ ಅಭಿಯಾನದ ಮೂಲಕ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ನಡೆಸಲಾಗುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯವರು, ಜನಜಾಗೃತಿ ವೇದಿಕೆ ಸದಸ್ಯರು, ಮಾಣಿ ವಲಯ ಮೇಲ್ವಿಚಾರಕಿ ಆಶಾ ಪಾರ್ವತಿ, ಮಾಣಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಸುಗಂಧಿನಿ ಹಾಗೂ ಶೌರ್ಯ ಸದಸ್ಯರು, ಸಂಘದ ಸದಸ್ಯರು ಕಾರ್ಯಕರ್ತರು ಸೇರಿದಂತೆ ಸುಮಾರು 200 ಮಂದಿ ಪಾಲ್ಗೊಂಡಿದ್ದರು.