(ನ್ಯೂಸ್ ಕಡಬ) newskadaba.com ಜ. 14. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಕೆಲಿಂಜ ಗ್ರಾಮದಲ್ಲಿ ಜಗತ್ತಿನ ಪವಿತ್ರ ಕಾರ್ಯಕ್ರಮಕ್ಕೆ ಪೂರಕವಾಗಿ ಗ್ರಾಮದಲ್ಲಿರುವ ನೆಟ್ಲ ಸದಾಶಿವೇಶ್ವರ ಮತ್ತು ನರಹರಿ ಸದಶಿವೇಶ್ವರ ದೇವಸ್ಥಾನಗಳ ಆವರಣ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. 7 ಶ್ರದ್ಧಾ ಕಾರ್ಯಕ್ರಮಗಳನ್ನು ನಡೆಸಿದ್ದು ಸುಮಾರು 230 ಸದಸ್ಯರು ಭಾಗವಹಿಸಿ ಸ್ವಚ್ಚತೆ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಟ್ರಸ್ಟಿಗಳು, ಜನಪ್ರತಿನಿಧಿಗಳು ಯೋಜನೆಯ ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಶ್ರೀಮತಿ ಸುಗುಣ ಶೆಟ್ಟಿ ಒಕ್ಕೂಟದ ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳಾದ ಗಣೇಶ್, ಸುಕನ್ಯಾ, ವಿಜಯ, ಲೀಲಾವತಿ, ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.