ಮಂಗಳೂರು : ಧರ್ಮಗಳ ನಡುವಿನ ಜಗಳ ಪುಕಾರು ಸುಳ್ಳು ಸುದ್ದಿ – ಪೊಲೀಸರ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಹೊರವಲಯದ ಕೋಡಿ ಬೆಂಗ್ರೆ ಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ಧರ್ಮಗಳ ನಡುವಿನ ಜಗಳ ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಡಲಾಗಿದೆ. ವಾಟ್ಸ್ಯಾಪ್ ಗಳಲ್ಲಿ ಬಂದ ವಿಚಾರವು ಸುಳ್ಳು ಸುದ್ದಿಯಾಗಿದೆ ಎಂದು ಮಂಗಳೂರು ನಗರ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ.

Nk Cake House

ಜನವರಿ 12ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ್ ಕಟ್ಟೆ ಬಳಿ ಯುವಕರ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೆಕ ಪ್ರಕರಣಗಳು ದಾಖಲಾಗಿತ್ತು. ಆದರೆ ಈ ಘಟನೆಯನ್ನು ವಿಭಿನ್ನ ರೀತಿಯಲ್ಲಿ ತಿರುಚಿ, ವಾಟ್ಸ್ಯಾಪ್ ನಲ್ಲಿ ಹರಿಯಬಿಡಲಾಗಿತ್ತು. ಹಿಂದೂಗಳ ಮನೆಯನ್ನು ಗುರಿಯಾಗಿರಿಸಿ ಮುಸ್ಲಿಂ ಯುವಕರು ದಾಳಿ ನಡೆಸಿದ್ದಾರೆ.

Also Read  ಕಡಬ: ಎಕ್ಸ್.ಎಲ್.ಲೇಡಿಸ್ ಬೊಟಿಕ್ಯು ವಸ್ತ್ರ ಮಾರಾಟ ಮಳಿಗೆ ಶುಭಾರಂಭ

ದಾಳಿ ನಡೆಸಿ ಪರಾರಿಯಾದ ವೇಳೆ ಓರ್ವನನ್ನು ಸೆರೆಹಿಡಿಯಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸುವಂತೆ ಹಿಂದೂಗಳ ಆಕ್ರೋಶ ಎಂದು ವಾಟ್ಸ್ಯಾಪ್ ಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಘಟನಾ ಸ್ಥಳಕ್ಕೆ ಡಿ.ಸಿ.ಪಿ. ಸಿದ್ದಾರ್ಥ್ ಘೋಯಲ್, ಪಣಂಬೂರು ಪೊಲೀಸ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಯಾವುದೇ ಧರ್ಮಗಳ ನಡುವಿನ ಕಲಹ ನಡೆದಿಲ್ಲ ಎಂದು ನಗರ ಪೊಲೀಸರು ತಮ್ಮ ಪ್ರಕಟನೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

error: Content is protected !!
Scroll to Top