ನಟ ದರ್ಶನ್’ಗೆ ನೋಟಿಸ್ ಜಾರಿ, ಗನ್ ಲೈಸೆನ್ಸ್ ರದ್ದು ಸಾಧ್ಯತೆ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಬಳಿ ಇರುವ ಗನ್ ಲೈಸೆನ್ಸ್’ನ್ನು ಪೊಲೀಸರು ಹಿಂಪಡೆಯುವ ಸಾಧ್ಯತೆಗಳಿವೆ.

Nk Cake House

ಕೊಲೆ ಪ್ರಕರಣದಲ್ಲಿ ಈಗಾಗಲೇ ಜಾಮೀನು ಮೇಲೆ ಬಿಡುಗಡೆಯಾಗಿರುವ ದರ್ಶನ್, ಪರವಾನಗಿ ಗನ್ ಬಳಸಿ ಪ್ರಕರಣ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಗಳಿವೆ. ಹೀಗಾಗಿ ನಿಮ್ಮ ಗನ್ ಲೈಸೆನ್ಸ್ ಏಕೆ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿ ನಗರ ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹು ಅವರು ನಟನಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

Also Read  ಆನ್ಲೈನ್ ತರಗತಿಯ ಪಾಠ ಕೇಳುತ್ತಿದ್ದ ವೇಳೆ ಕುತ್ತಿಗೆಗೆ ಜೋಕಾಲಿ ಬಿಗಿದು ಬಾಲಕ ಮೃತ್ಯು

ನೋಟಿಸ್ ತಲುಪಿದ 7 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ. ದರ್ಶನ್ ಸ್ಪಷ್ಟನೆ ನೀಡಿದ ಬಳಿಕ ಅದನ್ನು ಪರಿಶೀಲಿಸಿ ಗನ್ ಲೈಸೆನ್ಸ್ ಹಿಂಪಡೆಯುವ ಬಗ್ಗೆ ಪೊಲೀಸರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.

error: Content is protected !!
Scroll to Top