(ನ್ಯೂಸ್ ಕಡಬ) newskadaba.com ಜ. 12. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಣಿ ವಲಯದ ಅನಂತಾಡಿ ‘ಬಿ’ ಒಕ್ಕೂಟದ ವೈದ್ಯನಾಥೆಶ್ವರ ಸಂಘದ ಸದಸ್ಯೆ ಶ್ರೀಮತಿ ಪುಷ್ಪಾ ಎಂಬವರ ಪತಿ ಕೃಷ್ಣಪ್ಪ ಪೂಜಾರಿ ಎಂಬವರು ಕಳೆದ 4 ತಿಂಗಳಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದು, ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಕ್ರಿಟಿಕಲ್ ಪಂಡ್ ಸಹಾಯ ಧನದ ಚೆಕ್ ನ್ನು ತಾಲೂಕಿನ ಕೃಷಿಯಾಧಿಕಾರಿ ಚಿದಾನಂದ್, ಮೇಲ್ವಿಚಾರಕರಾದ ಶ್ರೀಮತಿ ಆಶಾ ಪಾರ್ವತಿರವರು ವಿತರಿಸಿದರು. ಈ ಸಂದರ್ಭದಲ್ಲಿ ಸೇವಾಪ್ರತಿನಿಧಿ ಪುಷ್ಪಲತಾ, ಶ್ವೇತಾ ಉಪಸ್ಥಿತರಿದ್ದರು.