ಅಸ್ಸಾಂನ 10 ತಿಂಗಳ ಮಗುವಿನಲ್ಲಿ ಹೆಚ್‌ಎಂಪಿ ವೈರಸ್ ಪತ್ತೆ

(ನ್ಯೂಸ್ ಕಡಬ) newskadaba.com .11: ಅಸ್ಸಾಂನ 10 ತಿಂಗಳ ಮಗುವಿನಲ್ಲಿ ಚೀನಾದ ಹ್ಯೂಮನ್ ಮೆಟಾನ್ಯೂಮೋ ವೈರಸ್(ಹೆಚ್‌ಎಂಪಿವಿ) ಪತ್ತೆಯಾಗಿದೆ.

Nk Cake House

ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮಗುವಿಗೆ ದಿಬ್ರುಗಢ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಎಎಂಸಿಹೆಚ್ ಸೂಪರಿಂಟೆಂಡೆಂಟ್ ಧೃಬಜ್ಯೋತಿ ಭುಯಾನ್ ಅವರು, ಕಳೆದ 4 ದಿನಗಳಿಂದ ಮಗುವು ಶೀತ ಜ್ವರದಿಂದ ಬಳಲುತ್ತಿದ್ದು, ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗ ಲಕ್ಷಣಗಳ ಆಧಾರದ ಮೇರೆಗೆ ಮಗುವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಗುವಿನಲ್ಲಿ ಹೆಚ್‌ಎಂಪಿವಿ ಸೋಂಕು ಇರೋದು ದೃಢವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Also Read  ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ.!!

ಈ ವರ್ಷದಲ್ಲಿ ಅಸ್ಸಾಂನಲ್ಲಿ ಕಾಣಿಸಿಕೊಂಡ ಮೊದಲ ಸೋಂಕು ಇದಾಗಿದೆ. ಆದಾಗ್ಯೂ ಇದು ಹೊಸದೇನಲ್ಲ ಎಂದು ವೈದ್ಯರು ಹೇಳಿದ್ದಾರೆ. 2001ರಲ್ಲಿ ಮೊದಲಬಾರಿಗೆ ಗುರುತಿಸಲಾದ ಈ ವೈರಸ್ ಹಲವು ವರ್ಷಗಳಿಂದ ಜಾಗತಿಕವಾಗಿ ಅಸ್ತಿತ್ವದಲ್ಲಿದೆ. 2014ರಲ್ಲಿ ಅಸ್ಸಾಂನಲ್ಲಿ ದಿಬ್ರುಗಢ ಜಿಲ್ಲೆಯಲ್ಲಿ 110 ಪ್ರಕರಣಗಳನ್ನು ಗುರುತಿಸಿದ್ದೆವು. ಪ್ರತಿ ವರ್ಷವೂ ಇದು ಪತ್ತೆಯಾಗುತ್ತಿದೆ. ಜನ ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ವಹಿಸಿದ್ರೆ ಸಾಕು ಎಂದು ವೈದ್ಯರು ಹೇಳಿದ್ದಾರೆ.

error: Content is protected !!
Scroll to Top