(ನ್ಯೂಸ್ ಕಡಬ) newskadaba.com ಜ.11: ಅಯೋಧ್ಯೆಯನ್ನು ಪ್ರಭು ಶ್ರೀರಾಮನ ಜನ್ಮಸ್ಥಳವೆಂದು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
2024ರಲ್ಲಿ ಅಂದರೆ, ಕಳೆದ ವರ್ಷವಷ್ಟೇ ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡು ಲಕ್ಷಾಂತರ ಜನರು ಇಲ್ಲಿನ ರಾಮನ ದರ್ಶನ ಪಡೆದುಕೊಂಡಿದ್ದಾರೆ. ಅಯೋಧ್ಯೆಯಲ್ಲಿನ ರಾಮ ಮಂದಿರವು ಹಿಂದೂ ಧರ್ಮೀಯರ ಜೀವಾಳವಾಗಿದೆ. ಇದೀಗ ಅಯೋಧ್ಯೆಯ ಬಾಲ ರಾಮನ ಪ್ರತಿಷ್ಠಾಪನೆಯಾಗಿ ವರ್ಷ ತುಂಬಿದೆ. ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮ ಇಂದಿನಿಂದ ಮೂರು ದಿನಗಳ ಕಾಲ ಜರುಗಲಿದೆ.