ದೆಹಲಿ: ಮತದಾನ ದಿನಾಂಕ ಘೋಷಣೆ; ಫೆ.5ಕ್ಕೆ ಮತದಾನ, ಫೆ.8ರಂದು ಮತ ಎಣಿಕೆ

(ನ್ಯೂಸ್ ಕಡಬ) newskadaba.com ಜ.07: ದೆಹಲಿಯ ವಿಧಾನಸಭಾ ಚುನಾವಣೆ ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ದೆಹಲಿ ವಿಧಾನಸಭೆಗೆ ಚುನಾವಣೆಯ ವೇಳಾಪಟ್ಟಿಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರ ಹಿರಿಯ ಚುನಾವಣಾ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

Nk Cake House

70 ಸದಸ್ಯ ಬಲದ ಅಸೆಂಬ್ಲಿಯ ಅವಧಿ ಫೆಬ್ರವರಿ 23 ರಂದು ಕೊನೆಗೊಳ್ಳುತ್ತದೆ ಮತ್ತು ಹೊಸ ಸದನವನ್ನು ರಚಿಸಲು ಅದಕ್ಕೂ ಮೊದಲು ಚುನಾವಣೆ ನಡೆಸಬೇಕಾಗಿದೆ. ರಾಷ್ಟ್ರ ರಾಜಧಾನಿ ಸಾಂಪ್ರದಾಯಿಕವಾಗಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆಯನ್ನು ಕಂಡಿದೆ.

ಎಎಪಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅರವಿಂದ್​ ಕೇಜ್ರಿವಾಲ್​​ ಚುನಾವಣೆ ಗೆದ್ದು ಮತ್ತೆ ಸಿಎಂ ಹುದ್ದೆಗೇರುವ ತವಕದಲ್ಲಿದ್ದಾರೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಹಾಗೂ ಹಾಲಿ ಸಿಎಂ ಅತಿಶಿ ಅವರು ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

Also Read  ವಯೋಶ್ರೇಷ್ಠ ಸಮ್ಮಾನ್ 2019 ಪ್ರಶಸ್ತಿ ➤ ಅರ್ಜಿ ಆಹ್ವಾನ

ಬಿಜೆಪಿ 29 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಎಎಪಿ ತೊರೆದು ಬಿಜೆಪಿ ಸೇರಿದ್ದ ಕೈಲಾಶ್​ ಗೆಹ್ಲೋಟ್​ ಬಿಜವಸನ್​ನಿಂದ ಸ್ಪರ್ಧಿಸುತ್ತಿದ್ದಾರೆ. ಪಟೇಲ್​ ನಗರದಿಂದ ರಾಜ್​ ಕುಮಾರ್, ದೆಹಲಿಯ ಮಾಜಿ ಕಾಂಗ್ರೆಸ್​ ಮುಖ್ಯಸ್ಥ ಅರವಿಂದ್​ ಸಿಂಗ್​ ಲವ್ಲಿ ಗಾಂಧಿ ನಗರದಿಂದ ಸ್ಪರ್ಧಿಸಲಿದ್ದಾರೆ.ಕಾಂಗ್ರೆಸ್​ 48 ಅಭ್ಯರ್ಥಿಗಳನ್ನು ಘೋಷಿಸಿದ್ದು, ಮತ್ತೊಂದು ಪಟ್ಟಿ ಹೊರಬೇಕಿದೆ. ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್​​ ಮಗ ಸಂದೀಪ್​ ದೀಕ್ಷಿತ್​ ಈ ಬಾರಿ ವಿಧಾನಸಭಾ ಚುನಾವಣೆಗೆ ಇಳಿಯಲಿದ್ದಾರೆ. ಈ ಹಿಂದೆ ಎರಡು ಬಾರಿ ಸಂಸದರಾಗಿದ್ದ ದೀಕ್ಷಿತ್​​ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಕಣಕ್ಕಿಳಿಯಲಿದ್ದಾರೆ. 2013 ಮತ್ತ 2015ರಲ್ಲಿ ಕೇಜ್ರಿವಾಲ್​ ಅವರು ಶೀಲಾ ದೀಕ್ಷಿತ್​​ ವಿರುದ್ದ ಜಯ ಸಾಧಿಸಿದ್ದರು.

Also Read  ಡಿಕೆಶಿ ಬಂಧನ ಖಂಡಿಸಿ ಕಡಬದಲ್ಲಿ ಪ್ರತಿಭಟನೆ

error: Content is protected !!
Scroll to Top