ದೆಹಲಿಯಲ್ಲಿ ದಟ್ಟ ಮಂಜು: 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಜ.07 ಬೆಂಗಳೂರು: ದೆಹಲಿಯಲ್ಲಿ ದಟ್ಟ ಮಂಜಿನ ವಾತಾವರಣ ಹಿನ್ನೆಲೆ 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ದಟ್ಟವಾದ ಮಂಜು ಆವರಿಸಿದ್ದ ಹಿನ್ನೆಲೆ ಸ್ಪಷ್ಟ ಗೋಚರತೆ ಕಡಿಮೆಯಾಗಿ 25 ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ.

Nk Cake House

ನಗರದಲ್ಲಿ ಕನಿಷ್ಠ ತಾಪಮಾನ 10.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ 5 ರಿಂದ 5.30ರ ನಡುವೆ ಪಾಲಂನಲ್ಲಿ 11-13 ಕಿ.ಮೀ ವೇಗದಲ್ಲಿ ವಾಯುವ್ಯ ಗಾಳಿ ಹಾಗೂ ದಟ್ಟವಾದ ಮಂಜಿನಲ್ಲಿ ಕನಿಷ್ಠ 150 ಮೀ. ಗೋಚರತೆ ಕಂಡುಬಂದಿದೆ. ಬೆಳಿಗ್ಗೆ 8.30ರ ಹೊತ್ತಿಗೆ 13 ಕಿ.ಮೀ ವೇಗದಲ್ಲಿ ಪಶ್ಚಿಮ ಗಾಳಿ ಹಾಗೂ ಮಂಜಿನಲ್ಲಿ ಕ್ರಮೇಣ 700 ಮೀ.ಗೆ ಸುಧಾರಿಸಿತ್ತು ‘ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಈ ಕುರಿತು ಅಧಿಕಾರಿಯೊಬ್ಬರು ಮಾತನಾಡಿ, ಮಂಜಿನ ವಾತಾವರಣದಿಂದಾಗಿ, ಒಟ್ಟು 25 ರೈಲುಗಳ ಸಂಚಾರದಲ್ಲಿ ಬೆಳಿಗ್ಗೆ 6 ಗಂಟೆಯವರೆಗೆ ವ್ಯತ್ಯಯ ಉಂಟಾಗಿದೆ ಎಂದು ತಿಳಿಸಿದ್ದಾರೆ.

Also Read  ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ ➤ 9 ಮಂದಿಯ ವಿರುದ್ದ ಎಫ್ಐಆರ್

error: Content is protected !!
Scroll to Top