ಮದ್ಯ ಕುಡಿಸಿ ಅತ್ಯಾಚಾರ, ಬಿಜೆಪಿ ಮುಖಂಡನ ಮೇಲೆ ಎಫ್‌ಐಆರ್

(ನ್ಯೂಸ್ ಕಡಬ) newskadaba.com ಜ.07 ಬೆಂಗಳೂರು: ಹಣಕಾಸು ಸಹಾಯ ಮಾಡುವುದಾಗಿ ಕರೆದೊಯ್ದು ಬಲವಂತವಾಗಿ ಮದ್ಯ ಕುಡಿಸಿ 26 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಸೋಮಶೇಖರ್ ಜಯರಾಜ್ ಎಂಬವರ ವಿರುದ್ಧ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ. ಪೊಲೀಸರು ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ. ದೂರುದಾರ ಯುವತಿಗೆ ಆಕೆಯ ಸ್ನೇಹಿತೆಯಿಂದ ಸೋಮಶೇಖರ್ ಪರಿಚಯವಾಗಿತ್ತು ಕಳೆದ ವರ್ಷ ಯುವತಿಯ ಮದುವೆ ಹಿನ್ನೆಲೆಯಲ್ಲಿ ಸೋಮಶೇಖರ್ ಬಳಿ ಹಣದ ಸಹಾಯ ಕೇಳಿದ್ದರು. ಸೋಮಶೇಖರ್ ಮಹಿಳೆ ಇರುವ ಪೀಜಿಗೆ ತೆರಳಿ, ಅಲ್ಲಿಂದ ಆಕೆಯನ್ನು ತನ್ನ ಫ್ಲಾಟ್‌ಗೆ ಕರೆದುಕೊಂಡು ಹೋಗಿ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ. ಅತ್ಯಾಚಾರ ಎಸಗಿದ ಬಳಿಕ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಕೂಡ ಹಾಕಿದ್ದ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಯುವತಿಯ ದೂರಿನ ಅನ್ವಯ ಬಿಜೆಪಿ ಮುಖಂಡ ಸೋಮಶೇಖರ್ ಜಯರಾಜ್ ವಿರುದ್ಧ ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಸೋಮಶೇಖರ್ ತಲೆಮರೆಸಿಕೊಂಡಿದ್ದಾರೆ. ಆತನ ಶೋಧ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Also Read  ? ಸೌದೆ ತರಲೆಂದು ತೋಟಕ್ಕೆ ತೆರಳಿದ್ದ ಬಾಲಕನನ್ನು ತಿಂದು ತೇಗಿದ ಹುಲಿ..!

Nk Cake House

 

error: Content is protected !!
Scroll to Top