ಬೆಂಗಳೂರು: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಬಿಡುಗಡೆ, ಒಟ್ಟು 1.02 ಕೋಟಿ ಮತದಾರರು

(ನ್ಯೂಸ್ ಕಡಬ) newskadaba.com ಜ.03 ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟು 1,02,64,714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ ಮಾಡಿದ ಅವರು 1,02,64,714 ಮತದಾರರಲ್ಲಿ 52,80,287 ಪುರುಷರು, 49,82,589 ಮಹಿಳೆಯರು ಮತ್ತು 1,838 ತೃತೀಯ ಲಿಂಗಿಗಳು ಇದ್ದಾರೆ ಎಂದರು.

ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ www.ceokarnataka.kar.nic.in — ಮತ್ತು BBMP ವೆಬ್‌ಸೈಟ್ www.bbmp.gov.in ಗಳಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು.

Also Read  ಶೂ ಲೇಸ್ನಿಂದ ನೇಣು ಬಿಗಿದುಕೊಂಡು ರೌಡಿ ಶೀಟರ್ ಆತ್ಮಹತ್ಯೆ

Nk Cake House

ಮೊಬೈಲ್ ಫೋನ್‌ನಲ್ಲಿ VHA (ಮತದಾರರ ಸಹಾಯವಾಣಿ ಅಪ್ಲಿಕೇಶನ್) ಅಥವಾ ವೆಬ್ ಪೋರ್ಟಲ್ voters.eci.gov.in ನಲ್ಲಿಯೂ ಮಾಹಿತಿ ಪಡೆಯಬಹುದು. e-EPIC ಡೌನ್‌ಲೋಡ್ ಮಾಡಿಕೊಂಡು, ಮತಗಟ್ಟೆ ಮತ್ತು ಮತದಾನದ ಶೇಕಡಾವಾರು ಮಾಹಿತಿಯಂತಹ ಇತರ ಮಾಹಿತಿಯನ್ನು ಪಡೆಯಬಹುದು. ನಗರದ 1.02 ಕೋಟಿ ಮತದಾರರ ಪೈಕಿ 95,391 ಯುವ ಮತದಾರರಿದ್ದಾರೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

error: Content is protected !!
Scroll to Top