ಧರ್ಮಸ್ಥಳ ಯೋಜನೆಯ ಬಿಳಿನೆಲೆ ವಲಯದಲ್ಲಿ ಹೊಸ ವರ್ಷದ ಡೈರಿ ವಿತರಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಜ. 06. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಶಕ್ಷರುಗಳಿಗೆ 2025ನೇ ಹೊಸ ವರ್ಷದ ಡೈರಿಯ ವಿತರಣಾ ಕಾರ್ಯಕ್ರಮವು ಮರ್ಧಾಳ ವಲಯ ಕಛೇರಿಯಲ್ಲಿ ನಡೆಯಿತು.

ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆಯವರು ಒಕ್ಕೂಟದ ಅಧ್ಶಕ್ಷರುಗಳಿಗೆ, ವಲಯದ ಸೇವಾಪ್ರತಿನಿಧಿಗಳಿಗೆ ಹಾಗೂ ಶೌರ್ಯಘಟಕದ ಘಟಕ ಪ್ರತಿನಿಧಿಯವರಿಗೆ ಹೊಸ ವರ್ಷದ ಡೈರಿಯನ್ನು ವಿತರಿಸಿ ಮಾತನಾಡಿ, 2024ನೇ ವರ್ಷದಲ್ಲಿ ಬಿಳಿನೆಲೆ ವಲಯದಲ್ಲಿ ಪ್ರಗತಿಬಂಧು ಸ್ವ-ಸಹಾಯ ಸಂಘಗಳಲ್ಲಿ ಆಗಿರುವ ಅಭಿವಧ್ಧಿ ಕಾರ್ಯಕ್ರಮಗಳು, ಒಕ್ಕೂಟದ ನಿರ್ವಹಣೆಯಲ್ಲಿ ಒಕ್ಕೂಟದ ಅಧ್ಶಕ್ಷರುಗಳ ತೊಡಗಿಸಿಕೊಳ್ಳುವಿಕೆ, ಸೇವಾಪ್ರತಿನಿಧಿಗಳಿಗೆ ಯೋಜನೆಯಿಂದ ನೀಡಿದ ಜವಾಬ್ದಾರಿಗಳ ಸಮರ್ಪಕ ನಿರ್ವಹಣೆ, ವಲಯದ ಶದ್ದಾಕೇಂದ್ರಗಳ ಸ್ವಚ್ಚತೆ ಕಾರ್ಯಕ್ರಮವನ್ನು ಮಕರ ಸಂಕ್ರಾಂತಿಯ ಮೊದಲು ನಡೆಸುವ ಬಗ್ಗೆ ಹಾಗೂ ಮಾರ್ಚ್ ಅಂತ್ಯದೊಳಗೆ ವಲಯದಲ್ಲಿ ನಡೆಸಬೇಕಾದ ಅತೀ ಅಗತ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Also Read  78ನೇ ಸ್ವಾತಂತ್ರ್ಯೋತ್ಸವದ ಸಡಗರ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

ಕೇಂದ್ರ ಒಕ್ಕೂಟ ಸಮಿತಿ ಹಾಗೂ ಬಿಳಿನೆಲೆ ವಲಯ ಒಕ್ಕೂಟದ ಅಧ್ಶಕ್ಷರಾದ ಸಂತೋಷ್ ಕೇನ್ಯರವರು 2025 ಹೊಸವರ್ಷಕ್ಕೆ ಸಿಹಿ ಹಂಚಿ ಶುಭಾಶಯ ಕೋರಿದರು. ತಾಲೂಕು ಶೌರ್ಯಘಟಕದ ಕ್ಯಾಪ್ಟನ್ ಬಿಳಿನೆಲೆ ವಲಯ ಮರ್ದಾಳ ಘಟಕದ ಘಟಕ ಪ್ರತಿನಿಧಿ ಭವಾನಿಶಂಕರ್ ಹೊಸ ವರ್ಷಕ್ಕೆ ಎಲ್ಲರಿಗೂ ಶುಭಾಶಯ ತಿಳಿಸಿದರು. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಶಕ್ಷರುಗಳಾದ ದರ್ಮಪಾಲ ಕೈಕಂಬ, ಶಿವಕುಮಾರ್ ಕೋಡಿಂಬಾಳ, ಧರ್ಮಪಾಲ ಕೊಂಬಾರು, ಸತೀಶ್ ಚಂದ್ರ ರೈ ಬಂಟ್ರ, ಪದ್ಮಾವತಿ ಶಿರಿಬಾಗಿಲು ಹಾಗೂ ರಾಜೇಶ್ ಬಿಳಿನೆಲೆ, ಸೇವಾಪ್ರತಿನಿಧಿಗಳಾದ ದಿನೇಶ್ ನೆಕ್ಕಿಲಾಡಿ, ನೇತ್ರ ಬಂಟ್ರ, ಜ್ಞಾನಸೆಲ್ವಿ ಕೊಡಿಂಬಾಳ, ಗಣೇಶ್ ಕೊಂಬಾರು, ರೇಖಾ ಸುಳ್ಯ, ವಿನೋದ್ ಕುಮಾರ್ ಶಿರಿಬಾಗಿಲು ಹಾಗೂ ಸಿ ಯಸ್ ಸಿ ನಿರ್ವಹಕಿ ಕು||ನಿಶಾ ಕೊಣಾಜೆ ಉಪಸ್ಥಿತರಿದ್ದರು. ಬಿಳಿನೆಲೆ ಸೇವಾಪ್ರತಿನಿಧಿ ಸತೀಶ್ ಆಜನ ಸ್ವಾಗತಿಸಿ ಕೊಣಾಜೆ ಸೇವಾಪ್ರತಿನಿಧಿ ಬೇಬಿ ವಂದಿಸಿದರು.

error: Content is protected !!
Scroll to Top