ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಅಳಕೆಮಜಲು ಕಿರಿಯ ಪ್ರಾಥಮಿಕ ಶಾಲೆಗೆ ಡೆಸ್ಕ್ ವಿತರಣೆ

(ನ್ಯೂಸ್ ಕಡಬ) newskadaba.com ಜ. 06. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.)ವಿಟ್ಲ ವತಿಯಿಂದ ಮಾಣಿ ವಲಯದ ಅಳಕೆಮಜಲು ಕಿರಿಯ ಪ್ರಾಥಮಿಕ ಶಾಲೆಗೆ ಸಮುದಾಯ ಅಭಿವೃದ್ಧಿ ಜ್ಞಾನದೀಪ ಕಾರ್ಯಕ್ರಮದಿಂದ ಡೆಸ್ಕ್ ಹಾಗೂ ಬೆಂಚ್ ವಿತರಣೆ ಮಾಡಲಾಯಿತು. ಮಾಣಿ ವಲಯ ಅಳಕೆ ಮಜಲು ಸೇವಾ ಪ್ರತಿನಿಧಿ ಸುಗಂಧಿನಿ, ಒಕ್ಕೂಟ ಅದ್ಯಕ್ಷರಾದ ಚಂದ್ರಹಾಸ ಮತ್ತು ಶೌರ್ಯ ಸದಸ್ಯರು, ಮುಖ್ಯೋಪಾಧ್ಯಾಯರಾದ ಇಸ್ಮಾಯಿಲ್ ರವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸಹಶಿಕ್ಷಕರು, SDMC ಅದ್ಯಕ್ಷರಾದ ತಿರುಮಲೇಶ್ವರ, ಉಪಾಧ್ಯಕ್ಷರಾದ ರೂಪಾ ಕಿಶೋರ್, SDMC ಸದಸ್ಯರು ಮತ್ತು ಪಂಚಾಯತ್ ಉಪಾಧ್ಯಕ್ಷರಾದ ಪದ್ಮನಾಭ ಸಪಲ್ಯ ಉಪಸ್ಥಿತರಿದ್ದರು.

error: Content is protected !!
Scroll to Top