ದಿಲ್ಲಿಯಲ್ಲಿ ಪ್ರತಿಕೂಲ ಹವಾಮಾನ; 100ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬ

(ನ್ಯೂಸ್ ಕಡಬ) newskadaba.com ಜ.03  ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಇಂದು (ಜ .3) ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟವಾದ ಮಂಜಿನಿಂದಾಗಿ ಕಡಿಮೆ ಗೋಚರತೆ ಕಂಡುಬಂದಿದೆ. ಪರಿಣಾಮ 100ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದ್ದು, ಇಂಡಿಗೋ, ಸ್ಪೈಸ್ ಜೆಟ್ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Nk Cake House

ದೆಹಲಿ ವಿಮಾನ ನಿಲ್ದಾಣದಲ್ಲಿ CAT III ತರಬೇತಿ ಪಡೆದ ಪೈಲಟ್‌ಗಳ ವಿಮಾನಗಳ ಲ್ಯಾಂಡಿಂಗ್ ಮುಂದುವರಿಯಲಿದೆ. ಈ ಕುರಿತು ಪ್ರಯಾಣಿಕರು ಆಯಾ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ದೆಹಲಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಡಿಐಎಎಲ್) ವಿನಂತಿಸಿದೆ. CAT III ಒಂದು ಸಂಚಾರ ವಿಧಾನವಾಗಿದ್ದು, ದಟ್ಟವಾದ ಮಂಜು ಮತ್ತು ಗೋಚರತೆ ಕಡಿಮೆ ಇರುವಂತಹ ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಮಾನಗಳು ಇಳಿಯಲು ಸಹಾಯ ಮಾಡುತ್ತದೆ. ದೆಹಲಿ ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿದಿನ ಸುಮಾರು 1,300 ವಿಮಾನ ಸಂಚಾರಗಳನ್ನು ಕಾರ್ಯಾಚರಿಸುತ್ತವೆ.

Also Read  ಉತ್ತರಪ್ರದೇಶದ ಕಾರ್ಮಿಕರ ಮೇಲೆ ಗುಂಡು ಹಾರಿಸಿದ ಉಗ್ರರು

error: Content is protected !!
Scroll to Top