(ನ್ಯೂಸ್ ಕಡಬ) newskadaba.com ಸವಣೂರು, ಮಾ.23. ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಲ್ಲಿ ದಿ.ಶೀನಪ್ಪ ಗೌಡ ಗಾಳಿಬೆಟ್ಟು ಇವರ ಪತ್ನಿಗೆ 2 ಲಕ್ಷ ಮೊತ್ತದ ಚೆಕ್ ನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಜನರಲ್ ಮೆನೇಜರ್ ಎಸ್.ಎಂ. ಗೋರ್ಬಲ್ ಅವರು ಕಾಣಿಯೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಂ. ಗೋರ್ಬಲ್ ಬ್ಯಾಂಕಿನ ಪ್ರತಿಯೊಬ್ಬ ಗ್ರಾಹಕರು ವರ್ಷಕ್ಕೆ ರೂ.330 ಮತ್ತು ರೂ.12 ರ ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಪ್ರಾದೇಶಿಕ ಪ್ರಬಂಧಕರಾದ ಎಸ್.ಜಿ. ಗಚ್ಚಿನಮಠ್, ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಸೀತಮ್ಮ ಖಂಡಿಗ, ಉಪಾಧ್ಯಕ್ಷೆ ಕಮಲಾಕ್ಷಿ, ಶಾಖಾ ಪ್ರಬಂಧಕರಾದ ರಘುಪ್ರಸಾದ್ ಉಪಸ್ಥಿತರಿದ್ದರು.
