ಮನು ಭಾಕರ್‌, ಗುಕೇಶ್‌ ಸೇರಿದಂತೆ ನಾಲ್ವರಿಗೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ ಘೋಷಿಸಿದ ಕೇಂದ್ರ

(ನ್ಯೂಸ್ ಕಡಬ) newskadaba.com .02 ನವದೆಹಲಿ: 2024ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಘೋಷಣೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಡೀ ದೇಶವೇ ಹೆಮ್ಮೆ ಪಡುವಂತೆ ಸಾಧನೆ ಮಾಡಿದ ನಾಲ್ವರು ಕ್ರೀಡಾಪಟುಗಳಿಗೆ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಕೇಂದ್ರ ಕ್ರೀಡಾ ಹಾಗೂ ಯುವಜನ ಖಾತೆ ಇಲಾಖೆ ಘೋಷಿಸಿದೆ.

2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಬೇಟೆಯಾಡಿದ ಶೂಟರ್ ಮನು ಭಾಕರ್, ವಿಶ್ವ ಚೆಸ್ ಚಾಂಪಿಯನ್ 18 ವರ್ಷದ ಡಿ ಗುಕೇಶ್, ಭಾರತ  ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಪ್ಯಾರಾಲಿಂಪಿಕ್ಸ್ ಪಟು ಪ್ರವೀಣ್ ಕುಮಾರ್‌ ಅವರಿಗೆ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿ ಅರಸಿ ಬಂದಿದೆ.

Also Read  ನಾಪತ್ತೆಯಾಗಿದ್ದ ಕ್ರಿಕೆಟಿಗ ಕೇದರ್ ಜಾಧವ್ ತಂದೆ ಕೊನೆಗೂ ಪತ್ತೆ..!

Nk Cake House

ಇನ್ನು ಇದೇ ವೇಳೆ ಕ್ರೀಡಾಕ್ಷೇತ್ರದಲ್ಲಿ ಅಸಾಧಾರಣ ಪ್ರದರ್ಶನ ತೋರಿದ ದೇಶದ 17 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 32 ಅಥ್ಲೀಟ್‌ಗಳಿಗೆ ಕೇಂದ್ರ ಸರ್ಕಾರವು ಅರ್ಜುನ ಪ್ರಶಸ್ತಿಯನ್ನು ಘೋಷಿಸಿದೆ. ಈ ಎಲ್ಲಾ ಅಥ್ಲೀಟ್‌ಗಳು 2025ರ ಜನವರಿ 17ರಂದು ರಾಷ್ಟ್ರಪತಿ ಭವನದಲ್ಲಿ ದೇಶದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಗೆ ಈ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ

error: Content is protected !!
Scroll to Top