(ನ್ಯೂಸ್ ಕಡಬ) newskadaba.com ಜ.02 ಸಿಡ್ನಿ: ಆಸ್ಟ್ರೇಲಿಯದ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಬುಧವಾರ ಎರಡೂ ತಂಡಗಳ ಆಟಗಾರರನ್ನು ಭೇಟಿ ಮಾಡಿದ್ದರು. ಇದೇ ವೇಳೆ ಟೀಮ್ ಇಂಡಿಯಾದ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ವಿಶೇಷವಾಗಿ ಕೊಂಡಾಡಿದ್ದರು. ನಾವು ಇಲ್ಲಿ ಒಂದು ಕಾನೂನು ಜಾರಿ ಮಾಡಬೇಕು. ಅದರಂತೆ ಬುಮ್ರಾ ಇಲ್ಲಿ ಎಡಗೈನಲ್ಲಿ ಬೌಲಿಂಗ್ ಮಾಡಬೇಕು ಅಥವಾ ಒಂದೇ ಸ್ಟೆಪ್ ರನ್‌ಅಪ್ ನಿಂದ ಬೌಲಿಂಗ್ ಮಾಡಬೇಕು ಎಂಬ ನಿಯಮ ಮಾಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.
ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. 907 ಅಂಕ ಹೊಂದುವ ಮೂಲಕ ಭಾರತೀಯ ದಾಖಲೆ ಸ್ಥಾಪಿಸಿದ್ದಾರೆ. ಈ ಹಾದಿಯಲ್ಲಿ ಆರ್. ಅಶ್ವಿನ್ ಅವರ 904 ಅಂಕಗಳ ದಾಖಲೆಯನ್ನು ಮುರಿದರು.