(ನ್ಯೂಸ್ ಕಡಬ) newskadaba.com ಜ.01: ಅಹಮದಾಬಾದ್: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿ ಹೊಸ ವರ್ಷಕ್ಕೆ ಅನಿಲ ಕಂಪೆನಿಗಳು ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದೆ. ಹೊಟೇಲ್ ಕೈಗಾರಿಕೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳು 14.50 ರೂ. ಗಳಷ್ಟು ಕಡಿಮೆಯಾಗಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.
ಪ್ರಸ್ತುತ 19 ಕೆಜಿಯ ಎಲ್‌ಪಿಜಿ ಸಿಲಿಂಡರ್ 181850 ರೂ. ಗೆ ಲಭ್ಯವಿದ್ದು, ಇಂದಿನಿಂದ 1804 ರೂ. ಗೆ ಲಭ್ಯವಾಗಲಿದೆ. ಇದರ ನಡುವೆ ವಿಮಾನಯಾನ ಸಂಸ್ಥೆಗಳಿಗೂ ಹೊಸ ವರ್ಷದ ಉಡುಗೊರೆ ನೀಡಿರುವ ತೈಲ ಕಂಪೆನಿಗಳು ಇಂಧನದ ಬೆಲೆಯನ್ನು ತಿಳಿಸಿದೆ. ಇದರಿಂದ ವಿಮಾನಗಳ ಟಿಕೇಟ್ ದರದಲ್ಲಿ ಖಡಿತಗೊಳ್ಳುವ ಸಾಧ್ಯತೆ ಇದೆ. ಇದರ ಲಾಭ ಪ್ರಯಾಣಿಕರಿಗೆ ಸಿಗಲಿದೆ. ಇನ್ನೂ ಗೃಹ ಬಳಕೆ ಎಲ್‌ಪಿಜಿಗಳ ಮೇಲೆ ಯಾವುದೇ ಬದಲಾವಣೆ ಮಾಡಿಲ್ಲ.