ಮಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಯುವ ಯಕ್ಷಗಾನ ಕಲಾವಿದ ಮೃತ್ಯು

(ನ್ಯೂಸ್ ಕಡಬ) newskadaba.com .01: ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ, ಯುವ ಯಕ್ಷಗಾನ ಕಲಾವಿದರೊಬ್ಬರು ಮೃತಪಟ್ಟ ಘಟನೆ ನಗರ ಹೊರವಲಯದ ಅರ್ಕುಳ ಜಂಕ್ಷನ್ ಬಳಿ ಡಿ. 31ರ ಸಂಜೆ ಸಂಭವಿಸಿದೆ.

ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಸಸಿಹಿತ್ಲು ಭಗವತೀ ಯಕ್ಷಗಾನ ಮೇಳದ ಕಲಾವಿದ ಪ್ರವೀತ್ ಕುಮಾರ್ (22) ಮೃತರು.

Nk Cake House

ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಪ್ರವೀತ್ ಅವರು ಡಿ. 31ರಂದು ಬಜಪೆ ಕಂದಾವರ ಬೈಲಿನಲ್ಲಿ ನಿಗದಿಯಾಗಿದ್ದ ಮೇಳದ ಯಕ್ಷಗಾನಕ್ಕೆ ತೆರಳುತ್ತಿದ್ದರು. ಈ ವೇಳೆ ಅರ್ಕುಳ ಜಂಕ್ಷನ್ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ವೇಳೆ ಐಸ್‌ಕ್ರೀಂ ಸಾಗಿಸುತ್ತಿದ್ದ ವಾಹನ ಪ್ರವೀತ್ ಮೇಲೆ ಹರಿದಿದೆ. ಇದರ ಪರಿಣಾಮ ಪ್ರವೀತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮೊಸಳೆಯನ್ನು ಹಿಡಿದಿಟ್ಟುಕೊಂಡು ಹಣ ಮಾಡಲು ಪ್ಲಾನ್ ಮಾಡಿದ್ದ ಹಳ್ಳಿ ಜನರು ➤ ಗ್ರಾಮಸ್ಥರಿಗೆ ಬಿಸಿ ಮುಟ್ಟಿಸಿದ ಅರಣ್ಯ ಅಧಿಕಾರಿಗಳು.!

error: Content is protected !!
Scroll to Top